ಚಿಕ್ಕಬಳ್ಳಾಪುರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರನ್ನು ಸೋಲಿಸುವುದು ಶತಃಸಿದ್ದವೆಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸವಾಲಸೆದಿದ್ದಾರೆ.
ಡಾ.ಕೆ ಸುಧಾಕರ್ ಓರ್ವ ಅಪ್ರಬುದ್ದ ವಕ್ರಬುದ್ದಿಯ ರಾಜಕಾರಣಿ, ಆತನನ್ನು ಪವಿತ್ರವಾದ ಸಂಸತ್ತಿನ ಮೆಟ್ಟಿಲು ಹತ್ತುವುದಕ್ಕೂ ಕೂಡ ಬಿಡುವುದಿಲ್ಲ.ಅವರ ಪರವಾಗಿ ಪ್ರಚಾರಕ್ಕೆ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದರೂ ಸುಧಾಕರ್ ಸೋಲಿಸದೇ ವಿರಮಿಸುವುದಿಲ್ಲವೆಂದು ಪ್ರದೀಪ್ ಈಶ್ವರ್ ಸವಾಲು ಹಾಕಿದರು
ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಹಾಗೂ ಹೈಕಮಾಂಡ್ ನಾಯಕರ ಕಾಲಿಗೆ ಬಿದ್ದು ಸುಧಾಕರ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ನಾನು ಎಲ್ಲಾ ಆದಾಯದ ದಾಖಲೆಗಳನ್ನು ಬಹಿರಂಗಪಡಿಸಲು ಸಿದ್ದನಿದ್ದೇನೆ ಆದರೆ ಸುಧಾಕರ್ ಪ್ರಾಮಾಣಿಕರಾಗಿದ್ದರೆ ಅವರ ಆದಾಯದ ಮೂಲ ಬಹಿರಂಗಪಡಿಸಲಿ ಎಂದು ಸವಾಲೆಸೆದರು.
ಕೋವಿಡ್ ಸಂದರ್ಭದಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ನಮ್ಮ ಸರ್ಕಾರ ಆರೋಪ ಮಾಡಿತ್ತು.ಇದಲ್ಲದೇ ಬಿಜೆಪಿ ನಾಯಕ ಯತ್ನಾಳ್ ಅವರು ಬಿಜೆಪಿ ಸರ್ಕಾರದಲ್ಲಿ 40,000 ಕೋಟಿ ರೂ. ಅವ್ಯವಹಾರ ನಡೆದಿದೆ ಆರೋಪ ಮಾಡಿದ್ದರು, ಇದರಿಂದ ಬಿಜೆಪಿ ಸರ್ಕಾರದ ಹಗರಣ ಬಯಲಾಗಿದೆ ಎಂದರು.