
ಕಾರ್ಕಳ,ಫೆ.23: ಮಗನನ್ನು ಕಾರ್ಕಳಕ್ಕೆ ಕರೆತಂದು ರಾಜಕೀಯ ರಂಗಕ್ಕೆ ಪ್ರವೇಶ ನೀಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವೀರಪ್ಪ ಮೊಯ್ಲಿ, ನನ್ನ ಮಗ ಸಧ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ.ಇದು ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ ಕಾರ್ಯಕ್ರಮ, ಹರ್ಷ ಮೊಯ್ಲಿ ಇದರ ಅಧ್ಯಕ್ಷ ಅಷ್ಟೇ, ಇದರಲ್ಲಿ ರಾಜಕೀಯ ಲಾಭದ ಲೆಕ್ಕಾಚಾರ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾರ್ಕಳದಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿದ್ದು, ನಮ್ಮಲ್ಲಿ ಯಾವುದೇ ಒಡಕಿಲ್ಲ, ನಾವೆಲ್ಲರೂ ಒಂದಾಗಿದ್ದೇವೆ ಎಂದು ಸೂಚ್ಯವಾಗಿ ಹೇಳಿದರು.
ವೇದಿಕೆಯಲ್ಲೇ ಲೋಕಲ್ ನಾಯಕರಿಬ್ಬರ ಕಿತ್ತಾಟ:
ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ ಸುದ್ದಿಗೋಷ್ಠಿಯಲ್ಲೇ ಇಬ್ಬರು ಲೋಕಲ್ ಲೀಡರ್ ಗಳು ಕಿತ್ತಾಡಿಕೊಂಡ ಸಣ್ಣ ಪ್ರಸಂಗವೂ ನಡೆಯಿತು. ವೀರಪ್ಪ ಮೊಯ್ಲಿ ಪರಮಾಪ್ತ ಹಾಗೂ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯ ಟ್ರಸ್ಟಿಯಾಗಿರುವ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದವರನ್ನು ಹಾಗೂ ಪತ್ರಕರ್ತರನ್ನು ಸ್ವಾಗತಿಸಿ ಕುಳಿತುಕೊಳ್ಳುತ್ತಿದ್ದಂತೆಯೇ ಪಕ್ಕದಲ್ಲಿ ಕುಳಿತಿದ್ದ ಬ್ಲಾಕ್ ಅಧ್ಯಕ್ಷ ಶುಭದ ರಾವ್ ಕೋಪಗೊಂಡು ಕಿತ್ತಾಟ ನಡೆಸಿದ ಘಟನೆಯೂ ನಡೆಯಿತು. ಮೂಲಗಳ ಪ್ರಕಾರ, ಬ್ಲಾಕ್ ಅಧ್ಯಕ್ಷರು ಸ್ವಾಗತಿಸುವುದು ವಾಡಿಕೆ, ಆದರೆ ಅವರನ್ನು ಪರಿಗಣಿಸಿಲ್ಲ ಎನ್ನುವು ಕಾರಣಕ್ಕೆ ಸಿಟ್ಟಾದರು ಎನ್ನಲಾಗಿದೆ. ಇತ್ತ ಜಟಾಪಟಿ ಮಗಿದ ತಕ್ಷಣವೇ ವೇದಿಕೆಯಲ್ಲಿದ್ದ ಕೃಷ್ಣಮೂರ್ತಿ ಮಾತ್ರ ನಾಪತ್ತೆಯಾಗಿದ್ದರು.
ನಮ್ಮಲ್ಲಿ ಒಗ್ಗಟ್ಟಿದೆ ಎಂದವರು ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವರೇ ಎನ್ನುವುದು ಯಕ್ಷಪ್ರಶ್ನೆ


.
.
.
.
.
.
.
.
.
.
