Share this news

ಚೆನ್ನೈ : ಮೈಸೂರು-ದರ್ಭಂಗಾ ಎಕ್ಸ್‌ಪ್ರೆಸ್ ತಮಿಳುನಾಡಿನ ಕವರಪೆಟ್ಟೈನಲ್ಲಿ ಲೂಪ್ ಲೈನ್ ಸಿಗ್ನಲ್ ವೈಫಲ್ಯದಿಂದಾಗಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾತ್ರಿ 8:30 ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡರು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಶುಕ್ರವಾರ ಮೈಸೂರಿನಿಂದ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನ ಕೆಎಸ್​ಆರ್​ ರೈಲು ನಿಲ್ದಾಣ ದಾಟಿ ಹೋಗ್ತಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಪೆರಂಬೂರು ದಾಟಿದ್ದ ರೈಲು, ದರ್ಬಾಂಗದತ್ತ ಪ್ರಯಾಣ ಬೆಳೆಸಿತ್ತು. ಆದ್ರೆ, 75 ಕಿಲೋಮೀಟರ್‌ ವೇಗದಲ್ಲಿ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲು, ಕಾವರಪೇಟ್ಟೈ ತಲುಪುತ್ತಿದ್ದಂತೆ ಲೂಪ್‌ ಲೇನ್‌ನಲ್ಲಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿತ್ತು.

ಕಾವರ ಪೇಟ್ಟೈ ರೈಲು ನಿಲ್ದಾಣದಲ್ಲಿ ಮುಖ್ಯ ಲೇನ್‌ಗೆ ಹೋಗುವಂತೆ ಸೂಚನೆ ಸಿಗ್ನಲ್‌ ನೀಡಿದ್ದರು. ಆದರೆ, ಮೇನ್‌ ಲೇನ್‌ಗೆ ಸಿಗ್ನಲ್‌ ಇದ್ದರೂ ಗೂಡ್ಸ್‌ ರೈಲು ನಿಂತಿದ್ದ ಲೂಪ್‌ ಲೇನ್‌ ಟ್ರ್ಯಾಕ್‌ಗೆ ರೈಲು ನುಗ್ಗಿತ್ತು. 75 ಕಿಮೀ ವೇಗದಲ್ಲಿ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ರೈಲಿನ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ ಎಲ್ಲರಿಗೂ ಭೂಕಂಪನದ ಅನುಭವವಾಗಿತ್ತು. 12ರಿಂದ 13 ಬೋಗಿಗಳು ಹಳಿ ತಪ್ಪಿ ಅಕ್ಕಪಕ್ಕಕ್ಕೆ ಬಂದು ಬಿದ್ದಿದ್ದವು.

ಶನಿವಾರ ಬೆಳಗ್ಗೆ 8.50ಕ್ಕೆ ಹೊರಡುವ ಎಸ್​ಎಂವಿಟಿ ಬೆಂಗಳೂರು-ಕಾಮಾಕ್ಯ (ರೈಲು ಸಂಖ್ಯೆ: 12551) ಎಸಿ ಎಕ್ಸಪ್ರೆಸ್​ ರೈಲು ಧರ್ಮಾವರಂ, ವಿಜಯವಾಡ ಮಾರ್ಗವಾಗಿ ಸಂಚರಿಸಲಿದೆ. ಇದರಿಂದಾಗಿ ಜೋಳರಪೆಟ್ಟೈ, ಕಟ್ಟಾಡಿ, ಪೆರಂಬೂರು ಹಾಗೂ ಗೂಡೂರು ನಿಲ್ದಾಣಗಳು ಬಿಟ್ಟು ಹೋಗಲಿವೆ.

ಬೆಳಗ್ಗೆ 9.15ಕ್ಕೆ ಹೊರಡುವ ಎಸ್​​ಎಂವಿಟಿ ಬೆಂಗಳೂರು-ದಾನಪುರ ಸಂಗಮಿತ್ರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12295) ರೈಲು, ಧರ್ಮಾವರಂ, ಕಾಜೀಪೇಟ್​ ಮಾರ್ಗವಾಗಿ ಹೋಗಲಿದೆ. ಕೆಆರ್​ಪುರ, ಬಂಗಾರಪೇಟೆ, ಕುಪ್ಪಂ, ಜೋಳರವಟ್ಟೈ, ಕಟ್ಟಾಡಿ, ಆರಕೋಣಂ, ಪೆರಂಬೂರ್​, ಗೂಡೂರ್​, ನೆಲ್ಲೂರು, ಒಂಗೋಲ್​, ವಿಜಯವಾಡ ಹಾಗೂ ವಾರಂಗಲ್​ ನಿಲ್ದಾಣಗಳು ತಲುಪಲಿದೆ.

 

 

Leave a Reply

Your email address will not be published. Required fields are marked *