Share this news

ಕಾರ್ಕಳ, ಫೆ.19: ಕಾರಿಗೆ ಸೈಡ್ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ಎರಡು ತಂಡಗಳ ನಡುವೆ ಉಂಟಾದ ಸಣ್ಣ ಜಗಳ ಬಳಿಕ ವಿಕೋಪಕ್ಕೆ ತೆರಳಿ ಪರಸ್ಪರ ಹೊಡೆದಾಡಿಕೊಂಡು ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ಪ್ರತಿದೂರು ದಾಖಲಾಗಿದೆ.

ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಫೆ.17ರಂದು ರಾತ್ರಿ ಈ ಘಟನೆ ನಡೆದಿದ್ದು, ಸುಧೀರ್ ಶೆಟ್ಟಿ(46) ಎಂಬವರು ಸೋಮವಾರ ರಾತ್ರಿ 9.45ರ ವೇಳೆಗೆ ತನ್ನ ಸ್ನೇಹಿತ ಮಂಜು ಎಂಬುವವರನ್ನು ನಂದಳಿಕೆಗೆ ಬಿಡಲು ಕಾರಿನಲ್ಲಿ ಹೋಗುತ್ತಿದ್ದಾಗ ನಂದಳಿಕೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಟಿಪ್ಪರ್ ಗಳು ಹೋಗುತ್ತಿದ್ದು ಟಿಪ್ಪರ್‌ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಜಾಗವಿಲ್ಲದ ಕಾರಣದಿಂದ ಚಾಲಕ ಟಿಪ್ಪರ್ ಲಾರಿ ನಿಲ್ಲಿಸಿದಾಗ, ಸುಧೀರ್ ಶೆಟ್ಟಿಯವರು ಟಿಪ್ಪರ್ ಚಾಲಕನಲ್ಲಿ ಸೈಡ್ ಕೊಡಲು ಆಗುವುದಿಲ್ಲವಾ ಎಂದು ಕೇಳಿದಾಗ ಅವರ ನಡುವೆ ಮಾತಿನ ಚಕಮಕಿ ನಡೆದಿದೆ, ಇದಾದ ಸ್ವಲ್ಪ ಹೊತ್ತಿನಲ್ಲಿ ಕಾರಿನಲ್ಲಿ ಬಂದ ಆರೋಪಿಗಳಾದ ಆದರ್ಶ ಶೆಟ್ಟಿ ಮತ್ತು ಆತನ ತಂಡದವರು ಸುಧೀರ್ ಶೆಟ್ಟಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸುತ್ತಿದ್ದಾಗ ಅಲ್ಲಿಯೇ ಇದ್ದ ರಿತೇಶ ಶೆಟ್ಟಿ ಎಂಬುವವರು ತಡೆಯಲು ಬಂದಾಗ ಅವರಿಗೂ ಹೊಡೆದು ನಂತರ 2 ಕಾರುಗಳಲ್ಲಿ 10 ಜನರ ತಂಡ ಮತ್ತೆ ಹಲ್ಲೆ ನಡೆಸಿದೆ ಎಂದು ಸುಧೀರ್ ಶೆಟ್ಟಿ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಈ ಪ್ರಕರಣದ ಕುರಿತಂತೆ ಟಿಪ್ಪರ್ ಚಾಲಕ ರಾಹುಲ್ ಟೆರೆನ್ಸ ಐಜು ಎಂಬವರು ಪ್ರತಿದೂರು ನೀಡಿದ್ದು, ಅವರು ನಂದಳಿಕೆಯ ಸಿಎಂ ಜಾಯ್ ಎಂಬವರ ಕ್ರಶರ್ ನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಕಳೆದ ಸೋಮವಾರ ರಾತ್ರಿ ತಾನು ಹಾಗೂ ಇನ್ನೋರ್ವ ಟಿಪ್ಪರ್ ಚಾಲಕ ಆದರ್ಶ ಶೆಟ್ಟಿ ಜೊತೆ ಟಿಪ್ಪರ್ ಲಾರಿಯಲ್ಲಿ ಜಲ್ಲಿ ಲೋಡ್ ಮಾಡಿಕೊಂಡು ಕೇರಳಕ್ಕೆ ಹೋಗುತ್ತಿದ್ದಾಗ ನಂದಳಿಕೆಯ ಗೋಳಿಕಟ್ಟೆ ತಲುಪುವಾಗ ಆರೋಪಿಗಳಾದ ಸುಧೀರ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ ಎಂಬವರು ಕಾರಿನಲ್ಲಿ ಟಿಪ್ಪರ್ ಓವರ್ ಟೇಕ್ ಮಾಡಿಕೊಂಡು ಲಾರಿ ಅಡ್ಡಗಟ್ಟಿ ನಮ್ಮ ಕಾರಿಗೆ ಯಾಕೆ ಸೈಡ್ ಕೊಟ್ಟಿಲ್ಲ ಎಂದು ಚಾಲಕನಿಗೆ ಅವಾಚ್ಯ ಪದಗಳಿಂದ ನಿಂದಿಸಿ ಚಾಲಕರಾದ ರಾಹುಲ್ ಟೆರೆನ್ಸ್ ಐಜು, ಆದರ್ಶ ಶೆಟ್ಟಿ ಮತ್ತು ಕ್ಲೀನರ್ ಶಾಂತ ಕುಮಾರ್ ಎಂಬವರನ್ನು ಲಾರಿಯಿಂದ ಹೊರಗೆಳೆದು ನೆಲಕ್ಕೆ ಕೆಡವಿ ತುಳಿದು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಕುರಿತು ಪೊಲೀಸರು ಎರಡೂ ದೂರುಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *