Share this news

ಬೆಳಗಾವಿ: ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯರಿಂದ ವೇದಿಕೆಯಲ್ಲೇ ಅವಮಾನಕ್ಕೊಳಗಾಗಿದ್ದ ಧಾರವಾಡ ಹೆಚ್ಚುವರಿ ಎಎಸ್ಪಿಯಾಗಿದ್ದ ನಾರಾಯಣ ಭರಮನಿ ಅವರಿಗೆ ರಾಜ್ಯ ಸರ್ಕಾರ ಮುಂಭಡ್ತಿ ನೀಡಿ ಅವರ ಸ್ವಯಂ ನಿವೃತ್ತಿ ಪತ್ರವನ್ನು ತಿರಸ್ಕರಿಸಿದೆ. ಸಿಎಂ ಸಿದ್ಧರಾಮಯ್ಯನವರು ನಾರಾಯಣ ಭರಮನಿಗೆ ಕಪಾಳಮೋಕ್ಷಕ್ಕೆ ಕೈ ಎತ್ತಿದ್ದರಿಂದ ಬೇಸರಿಸಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದರು. ಬಳಿಕ ಅವರನ್ನು ಸಿಎಂ, ಗೃಹ ಸಚಿವರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.ಇದೀಗ ನಾರಾಯಣ ಭರಮನಿ ಅವರನ್ನು ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ನೇಮಕ ಮಾಡಿ ಆದೇಶಿಸಿದೆ.

ಕಳೆದ ಏಪ್ರಿಲ್.28ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶದ ಸಂದರ್ಭದಲ್ಲಿ ಬಿಜೆಪಿ ಮಹಿಲ ಕಾರ್ಯಕರ್ತರು ಸಿಎಂ ಭಾಷಣದ ವೇಳೆಯೇ ಪ್ರತಿಭಟನೆ ನಡೆಸಿದ್ದರು. ಇದರಿಂದ ಕೆಂಡಾಮAಡಲರಾಗಿದ್ದ ಸಿದ್ಧರಾಮಯ್ಯ ಪೊಲೀಸರನ್ನು ಏಕವಚನದಲ್ಲೇ ಗದರಿಸಿದಾಗ ಧಾರವಾಡ ಹೆಚ್ಚುವರಿ ಎಎಸ್ಪಿ ನಾರಾಯಣ ಭರಮನಿ ಅವರ ಮುಂದೆ ಹೋಗಿ ನಿಂತಿದ್ದರು.ಈ ವೇಳೆ ಸಿಎಂ ಸಿಟ್ಟಿನಿಂದ ಹೊಡೆಯಲು ಕೈಎತ್ತಿದ್ದರು. ಈ ಘಟನೆಯ ಬಳಿಕ ಸಿಎಂ ನಡವಳಿಕೆ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.

 

 

Leave a Reply

Your email address will not be published. Required fields are marked *