ಕಾರ್ಕಳ: ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನವೀನ್ಚಂದ್ರ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮೇ 22ರಂದು ಗುರುವಾರ ಚುನಾವಣೆ ನಡೆಯಿತು. ಸಹಕಾರ ಸಂಘಗಗಳ ಚುನಾವಣಾಧಿಕಾರಿ ಕೆ.ಆರ್ ರೋಹಿತ್ ಕುಮಾರ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ನವೀನ್ಚಂದ್ರ ಜೈನ್ ಈ ಹಿಂದೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನೂತನ ಅಧ್ಯಕ್ಷರಿಗೆ ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಶುಭಕೋರಿದರು.