ಹೆಬ್ರಿ: ವರಂಗ ಗ್ರಾಮದ ಕೆಲಕಿಲ ಸೇತುವೆಯ ಬಳಿ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಬೈಕ್ ಸವಾರ ಹಾಗೂ ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ಕಾರ್ಕಳ ಕಡೆಯಿಂದ ಹೆಬ್ರಿ ಮಾರ್ಗವಾಗಿ ಕೊಪ್ಪ ತಾಲೂಕಿನ ಎನ್’ಆರ್ ಪುರಕ್ಕೆ ಹೋಗುತ್ತಿದ್ದ ಕಾರು ಹಾಗೂ ಹೆಬ್ರಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಪಲ್ಸರ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಬೈಕ್ ಸವಾರರು ಎಣ್ಣೆಹೊಳೆಯ ನಿವಾಸಿಗಳು ಎಂದು ತಿಳಿದು ಬಂದಿದ್ದು ಗಾಯಾಳುಗಳ ವಿವರಗಳು ಇನ್ನಷ್ಟೇ ಲಭಿಸಬೇಕಿದೆ. ಅಪಘಾತದ ತೀವ್ರತೆಗೆ ಪಲ್ಸರ್ ಬೈಕಿನ ಮುಂಭಾಗದ ಚಕ್ರ ತುಂಡಾಗಿದ್ದು, ಕಾರು ಕೂಡ ಜಖಂಗೊಂಡಿದೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಬ್ರಿ ಪೊಲೀಸರು ಘಟನಾಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
