ಕಾರ್ಕಳ: ನೀರೆ ಗ್ರಾಮ ಪಂಚಾಯಿತಿಯ ಎರಡನೇ ಸುತ್ತಿನ ಗ್ರಾಮಸಭೆಯು ಫೆ.19ರಂದು ನೀರೆ ಸುವರ್ಣ ಸಮುದಾಯ ಭವನದಲ್ಲಿ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು ಅಧ್ಯಕ್ಷತೆಯಲ್ಲಿ ಜರುಗಿತು.
ಗ್ರಾಮಸಭೆಯ ನೋಡೆಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ನಿರ್ದೇಶಕರಾದ ಗೋವಿಂದ ನಾಯ್ಕ್ ಮಾತನಾಡಿ, ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇಲಾಖೆಯ ಸವಲತ್ತುಗಳನ್ನು ಅತೀ ಹೆಚ್ಚಾಗಿ ಪಡೆಯುವಂತೆ ಕೋರಿದರು. ಇದಲ್ಲದೇ ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪಂಚಾಯತ್ ನ ಅಧ್ಯಕ್ಷ ಸಚ್ಚಿದಾನಂದ ಪ್ರಭು ಮಾತನಾಡಿ, ಗ್ರಾಮ ಸಭೆಯ ಮಹತ್ವ, ಗ್ರಾಮಸಭೆಯಲ್ಲಿ ಪ್ರತಿಯೊಬ್ಬರ ಮತದಾರರ ಪಾಲ್ಗೊಳ್ಳುವಿಕೆ, ಜನರಿಗೆ ಸಿಗುವ ಸವಲತ್ತುಗಳನ್ನು ಸದಸ್ಯರ ಸಹಕಾರದೊಂದಿಗೆ ಆದ್ಯತಾ ಮೇರೆಗೆ ವಿತರಣೆ ಮಾಡಲಾಗುವುದೆಂದರು.
ಗ್ರಾಮಸ್ಥರಾದ ವಿಶ್ವನಾಥ ಶೆಟ್ಟಿ, ಮಂಗಗಳ ಹಾವಳಿಯಿಂದ ಬೆಳೆಗಳು ಹಾನಿಯಾಗುತ್ತಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು. ಇಲಾಖಾಧಿಕಾರಿಗಳಾದ ಆರೋಗ್ಯ ಇಲಾಖೆಯ ಜಯಶ್ರೀ, ಮೆಸ್ಕಾಂ ಇಲಾಖೆಯಿಂದ ಮ್ಯಾಕ್ಸಿ, ಪಶುವೈದ್ಯ ಡಾ.ಅರುಣ್ ಕುಮಾರ್, ಅರಣ್ಯ ಇಲಾಖೆಯ ಮಂಜುಳಾ ಇಲಾಖಾ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರು, ಸರ್ವಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಬನಶಂಕರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಎಲ್ ಸಿ ಆರ್ ಪಿ, ಎಂಬಿಕೆ, ಒಕ್ಕೂಟದ ಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು
ಗಣೇಶ್ ಪ್ರಾರ್ಥಿಸಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಂಕಿತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ವರದಿಯನ್ನು ಮಂಡಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.
