ಕಾರ್ಕಳ: ಕಾರುಗಳು ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಪ್ರಯಾಣಿಕ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನೀರೆ ಗ್ರಾಮದ ಗರಡಿ ಬಳಿ ಸಂಭವಿಸಿದೆ.
ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಕೇಶವ (72) ಎಂಬವರು ಗಾಯಗೊಂಡಿದ್ದಾರೆ
ಕೇಶವ ಅವರು ತನ್ನ ಮಗ ಹರೀಶ್ ಎಂಬವರ ಕಾರಿನಲ್ಲಿ ಉಡುಪಿಯಿಂದ ಕಾರ್ಕಳಕ್ಕೆ ಬರುತ್ತಿದ್ದಾಗ ನೀರೆ ಗರಡಿ ಬಳಿ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಕಾರು ಚಾಲಕ ಸಂತೋಷ್ ತನ್ನ ರಿಟ್ಜ್ ಕಾರನ್ನು ಅತಿವೇಗವಾಗಿ ಚಲಾಯಿಸಿ ಹರೀಶ್ ಅವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಈ ಅಪಘಾತದಿಂದ ಕೇಶವ ಅವರ ಮುಖ ಹಾಗೂ ಎದೆಗೆ ಗಾಯಗಳಾಗಿವೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ