Share this news

 

ಕಾರ್ಕಳ: ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 04 ರಂದು ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ಸುಮಂತ ಗೌಡ ಎಸ್. ಡಿ 99.923686 ಪರ್ಸಂಟೈಲ್ ನೊಂದಿಗೆ 596 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ 1623ನೇ ರ‍್ಯಾಂಕ್, ಪ್ರಜ್ವಲ್ ಎಸ್. ಎನ್ 99.686435 ಪರ್ಸಂಟೈಲ್ನೊAದಿಗೆ 588 ಅಂಕಗಳನ್ನು ಗಳಿಸಿ, ರಾಷ್ಟ್ರಮಟ್ಟದಲ್ಲಿ 2483ನೇ ರ‍್ಯಾಂಕ್, ರಾಜೇಶ್ ಹೆಚ್ ಎ 99.857286 ಪರ್ಸಂಟೈಲ್ ನೊಂದಿಗೆ 583 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ 3025ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆಗೈದಿದ್ದಾರೆ.

ಇತರ ವಿದ್ಯಾರ್ಥಿಗಳಾದ ಸಾತ್ವಿಕ್ ಭಂಡಾರಿ 560, ಹೇಮಂತ್ ಕುಮಾರ್ 551, ಪ್ರಾಪ್ತಿ ಶೆಟ್ಟಿ 541, ಪ್ರಥಮ್ ಪಟೇಲ್ ಹೆಚ್. ಡಿ 539, ಸಂಗೀತಾ ಬಿ. ಎಮ್ 536, ಶ್ರೀನಿಧಿ ಡಿ 531, ವಿನಯ್ ಎಸ್ 523, ಸ್ನೇಹಾ ಬಸವರಾಜ್ ಬಿ. 521, ಯುವರಾಜ್ ಪಟೇಲ್ 521, ಗಣೇಶ್ ಜಿ 519, ಶಕ್ತಿ ಎಸ್. ಗೌಡ 519, ಸೃಷ್ಟಿ ಪಾಟೀಲ್ 515, ಶ್ರೀನಿಧಿ ಪಿ.ಯು 514, ನಿನಾದ್ ಹೆಚ್. ಎಮ್ 513, ಪ್ರಥಮ್ ಎಸ್. ಪಿ 512, ಧ್ರುವ ಪಿ 509, ಮೇಘನಾ ಯು. ವೈ 509, ಅಭಿನಂಧನ್ 504 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆಗೈದಿದ್ದಾರೆ.

500ರ ಮೇಲೆ 28 ಮತ್ತು 400ರ ಮೇಲೆ 192 ವಿದ್ಯಾರ್ಥಿಗಳು ಅಂಕಗಳನ್ನು ಪಡೆದಿರುತ್ತಾರೆ. ಕಳೆದ ಬಾರಿಯ NEET ಪರೀಕ್ಷೆಯ ಮೂಲಕ ಕಾಲೇಜಿನ ವಿದ್ಯಾರ್ಥಿಗಳು JIPMER, AIIMS MANGALAGIRI ಮತ್ತುAIIMS  NAGPUR ನಂತಹ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು.
ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಲೋಹಿತ್ ಎಸ್.ಕೆ, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.

 

 

 

 

 

 

 

Leave a Reply

Your email address will not be published. Required fields are marked *