Share this news

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ನೂತನ ಲಗೇಜ್ ರೂಲ್ಸ್ ಜಾರಿ ಮಾಡಿದೆ ಎಂದು ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸಂಬಂಧ ಕೆಎಸ್​ಆರ್​ಟಿಸಿ ಸ್ಪಷ್ಟೀಕರಣ ನೀಡಿದ್ದು, ಸಾಮಾಜಿಕ‌ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ ಕೆಎಸ್​ಆರ್​ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂದು ಪ್ರಕಟವಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ನಿಗಮ ಯಾವುದೇ ಹೊಸ ಲಗೆಜ್​ ನಿಯಮಗಳನ್ನು ಜಾರಿಗೆ ತಂದಿಲ್ಲ ಎಂದು ಹೇಳಿದೆ.

ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರೌ ಲಗೇಜ್ / ಸರಕುಗಳನ್ನು ಸಾಗಿಸಲು ಹಿಂದಿನಿಂದಲೂ ವ್ಯವಸ್ಥೆ ಜಾರಿಯಿದ್ದು, ಅಂದರೆ ವಾಷಿಂಗ್ ಮಷಿನ್, ಫ್ರಿಡ್ಜ್, ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ ಪೈಪ್, ಪಾತ್ರೆ, ಬೆಕ್ಕು, ನಾಯಿ, ಮೊಲಗಳನ್ನು ಸಾಗಿಸಲು ಅವಕಾಶಗಳನ್ನು ದಿನಾಂಕ 05-11-1999 ರಿಂದಲೇ (ಬಸ್ಸಿನಲ್ಲಿ‌ರುವ ಸ್ಥಳಾವಕಾಶಕ್ಕೆ ಅನುಗುಣವಾಗಿ) ನಿಗಮದಲ್ಲಿ ಜಾರಿಯಲ್ಲಿರುತ್ತದೆ.”

ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಕಾಲದಿಂದ ಕಾಲಕ್ಕೆ ದರಗಳ ಪರಿಷ್ಕರಣೆ, 30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ, ಸಾಗಿಸಬಹುದಾದ ವಸ್ತುಗಳ ಪ್ರಯಾಣ ಇತ್ಯಾದಿಗಳನ್ನು ಉಲ್ಲೇಖಿಸಿ ಪ್ರಸ್ತುತ ದಿನಾಂಕ: 28-10-2022 ರಿಂದ ಲಗೇಜ್ ನಿಯಮ / ಸುತ್ತೋಲೆ ಜಾರಿಯಲ್ಲಿರುತ್ತದೆ.”

“ದಿನಾಂಕ: 28-10-2022 ರ ನಂತರ ಇತ್ತೀಚೆಗೆ ಯಾವುದೇ ಹೊಸ ಲಗೇಜ್ ನಿಯಮ / ಸುತ್ತೋಲೆಯನ್ನು ನಿಗಮದಲ್ಲಿ ಜಾರಿಗೆ ತಂದಿರುವುದಿಲ್ಲ ಎಂಬುದನ್ನು ತಮ್ಮ ಆದ್ಯ ಗಮನಕ್ಕೆ ತರಲಾಗಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

ಹೊಸ ಲಗೇಜ್ ನಿಯಮ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ಸುದ್ದಿಗೆ ಪ್ರತಿಕ್ರಿಯಿಸಿ ಕೆಎಸ್ಆರ್ಟಿಸಿ ಸ್ಪಷ್ಟೀಕರಣ ನೀಡಿದೆ. ಹೊಸ ಲಗೇಜ್ ನಿಯಮಗಳನ್ನು ಜಾರಿಗೆ ತಂದಿಲ್ಲ, 1999ರಿಂದಲೇ ಲಗೇಜ್ ಸಾಗಣೆಗೆ ನಿಯಮಗಳಿವೆ ಎಂದು ತಿಳಿಸಿದೆ. 2022ರ ಅಕ್ಟೋಬರ್ 28ರಿಂದ ದರ ಪರಿಷ್ಕರಣೆ ಮತ್ತು 30 ಕೆಜಿ ವರೆಗೆ ಉಚಿತ ಲಗೇಜ್​ ಸಾಗಣೆಗೆ ಅವಕಾಶವಿದೆ. ಯಾವುದೇ ಹೊಸ ನಿಯಮಗಳಿಲ್ಲ ಎಂದು ಕೆಎಸ್ಆರ್ಟಿಸಿ ಸ್ಪಷ್ಟಪಡಿಸಿದೆ.

 

 

Leave a Reply

Your email address will not be published. Required fields are marked *