ಕಾರ್ಕಳ ಆ,22: ನಿಟ್ಟೆ ಇಂಜಿನಿಯರಿAಗ್ ಕಾಲೇಜು ವಿದ್ಯಾರ್ಥಿಯೊಬ್ಬ ಬುಧವಾರ ಬಸ್ಸಿನಿಂದ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆದ ಬೆನ್ನಲ್ಲೇ ಬಸ್ಸು ಮಾಲಕರು, ಕಾಲೇಜು ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿ ಸಮೂಹ ಎಬಿವಿಪಿ ಸಂಘಟನೆಯ ಬೆಂಬಲದೊAದಿಗೆ ತರಗತಿಗಳನ್ನು ಬಹಿಷ್ಕರಿಸಿ ಬೀದಿಗಿಳಿದು ಮೃತಪಟ್ಟ ವಿದ್ಯಾರ್ಥಿಯ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ನಿಟ್ಟೆಯ ಪದವಿ ವಿಭಾಗದ ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿ ಜನಿತ್ ಶೆಟ್ಟಿ ಎಂಬವರು ಮಾಳದಿಂದ ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಬಸ್ಸಿನಿಂದ ಬಿದ್ದು ತೀವೃವಾಗಿ ಗಾಯಗೊಂಡು ಮೃತಪಟ್ಟಿದ್ದರು. ಬಸ್ಸು ಚಾಲಕನ ನಿರ್ಲಕ್ಷö್ಯತನವೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಬಸ್ಸು ಚಾಲಕ ಹಾಗೂ ಕಂಡಕ್ಟರ್ ವಿರುದ್ಧ ಅಮಾಯಕ ವಿದ್ಯಾರ್ಥಿಯೊಬ್ಬ ದಾರುಣವಾಗಿ ಬಲಿಯಾಗಿದ್ದು ಇದಕ್ಕೆ ಬಸ್ಸು ಮಾಲಕರು ಹಾಗೂ ನಿಟ್ಟೆಯ ಆಡಳಿತ ಮಂಡಳಿಯೇ ಹೊಣೆ ಎಂದು ವಿದ್ಯಾರ್ಥಿಗಳು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಮುಂಜಾನೆ ಬೇಗನೇ ತರಗತಿಗಳು ಆರಂಭವಾಗುತ್ತಿದ್ದು ಇದರಿಂದ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೇ ಬಸ್ಸುಗಳು ರಶ್ ಆಗಿ ಇಂತಹ ದುಘಟನೆಗಳು ಸಂಭವಿಸುತ್ತವೆ. ಅಮಾಯಕ ವಿದ್ಯಾರ್ಥಿಯೊಬ್ಬ ಬಸ್ ಮಾಲಕರ ನಿರ್ಲಕ್ಷö್ಯಕ್ಕೆ ಬಲಿಯಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೃತಪಟ್ಟ ವಿದ್ಯಾರ್ಥಿಯ ಶುಲ್ಕವನ್ನು ಬಸ್ಸು ಮಾಲಕರು ಭರಿಸಿ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರಧನ ನೀಡಲೇಬೇಕು ಎಂದು ಒತ್ತಾಯಿಸಿದರು. ಖಾಸಗಿ ಬಸ್ಸುಗಳು ಮಾಲಕರ ಹಣದ ದಾಹಕ್ಕೆ ಇನ್ನೆಷ್ಟು ವಿದ್ಯಾರ್ಥಿಗಳನ್ನು ಬಲಿ ಪಡೆಯುತ್ತೀರಿ ಎಂದು ವಿದ್ಯಾರ್ಥಿಗಳ ಆಕ್ರೋಶ ಹೊರಹಾಕಿದರು.ಇದಲ್ಲದೇ ಕ ಮಾಳ ಹುಕ್ರಟ್ಟೆಯ ವಿದ್ಯಾರ್ಥಿ ಜನಿತ್ ದಾರುಣ ಸಾವಿಗೆ ಕಾರಣವಾದ ಬಸ್ ಅವಘಡವು ಇದೇ ಮೊದಲೇನಲ್ಲ ಇತಂಹ ಸಾಕಷ್ಟು ದುರ್ಘಟನೆಗಳು ಈ ಹಿಂದೆ ನಡೆದಿವೆ.ಇಂತಹ ಘಟನೆಗಳು ಇನ್ನೆಂದೂ ಮರುಕಳಿಸಬಾರದು, ದುರ್ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಒಂದು ವಾರದೊಳಗೆ ಬಸ್ಸಿನ ಸಮಸ್ಯೆ ನಿವಾರಿಸಿ ಸಮಸ್ಯೆ ಬಗೆಹರಿಸಬೇಕೆಂದು ಗಡುವು ನೀಡಿದ್ದಾರೆ.
ಇದಕ್ಕೆ ಕಾರ್ಕಳ ತಹಶೀಲ್ದಾರ್ ಉತ್ತರಿಸಿ, ವಿದ್ಯಾರ್ಥಿಯ ಸಾವಿಗೆ ಕಾರಣರಾದ ಬಸ್ ಚಾಲಕ, ಮಾಲಕರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ, ಗ್ರಾಮೀಣ ಭಾಗದಲ್ಲಿ ಬಸ್ಸಿನ ಸಮಸ್ಯೆ ಇರುವಲ್ಲಿ ಸರ್ಕಾರಿ ಬಸ್ ಓಡಿಸುವ ಕುರಿತು ಸಾರಿಗೆ ಇಲಾಖೆ ಜತೆ ಮಾತುಕತೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಾವಿರಾರು ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಲು ಯತ್ನಿಸಿದರು. ಬಳಿಕ ಪ್ರತಿಭಟನಾ ಮೆರವಣಿಗೆ ನಡೆಸಿ ಅಧಿಕಾರಿಗಳು ತೀವೃ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ಉಡುಪಿ ತಾಲೂಕು ಸಂಚಾಲಕ ಶ್ರೇಯಸ್ ಅಂಚನ್,ಕಾರ್ಕಳ ತಾಲೂಕು ಸಂಚಾಲಕ ಪವನ್ ಹಾಗೂ ಪ್ರಮುಖ ಕಾರ್ಯಕರ್ತರಾದ ಮನೋಜ್, ಹೃಷಿತ್, ಮನೀಶ್, ಧನುಷ್, ಹೃತ್ವಿಕ್, ಮನು ಶೆಟ್ಟಿ ಮತ್ತು ಸಾವಿರಾರು ಎಬಿವಿಪಿ ಕಾರ್ಯಕರ್ತರು ಭಾಗವಹಿಸಿದ್ದರು
`