ಕಾರ್ಕಳ: ಕರಾವಳಿ ಜಿಲ್ಲೆಗೆ ಹಲಸಿನ ವಿವಿಧ ಖಾದ್ಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಹಲಸಿನ ಹಣ್ಣಿನ ಸಂಸ್ಕರಣಾ ಘಟಕ ಆರಂಭಿಸಲಾಗಿದ್ದು ಮಾ.15ರಂದು ಹಲಸು ಖಾದ್ಯ ಸಂಸ್ಕರಣಾ ಘಟಕದ ಉದ್ಘಾಟನೆ ಹಾಗೂ ಮಾ.16ರಂದು ನಿಟ್ಟೆ ಕಾಲೇಜಿನ ಅಡಿಟೋರಿಯಂನಲ್ಲಿ ಪ್ರಾದೇಶಿಕ ಕೃಷಿಉದ್ಯಮ ಸಮಾವೇಶ ನಡೆಯಲಿದೆ ಎಂದು ನಿಟ್ಟೆ ಅಟಲ್ ಇನ್ಕುö್ಯಬೇಷನ್ ಸೆಂಟರ್‌ನ ಸಿಇಓ ಡಾ.ಎ,ಪಿ ಆಚಾರ್ ಹೇಳಿದರು.
ಅವರು ಮಂಗಳವಾರ ನಿಟ್ಟೆಯ ಹಲಸಿನ ಖಾದ್ಯ ತಯಾರಿಕಾ ಘಟಕದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈದರಾಬಾದ್ ನ್ಯಾಶನಲ್ ಇನ್ಸಿ÷್ಟಟ್ಯೂಟ್ ಆಫ್ ಎಂ.ಎಸ್.ಎA.ಇ , ಎಐಸಿ ನಿಟ್ಟೆ ಇನ್ಕುö್ಯಬೇಶನ್ ಹಾಗೂ ನಿಟ್ಟೆ ರೈತ ಉತ್ಪಾದಕ ಕಂಪೆನಿಯ ಸಹಯೋಗದಲ್ಲಿ ಹಲಸು ಸಂಸ್ಕರಣಾ ಘಟಕ ಸ್ಥಾಪನೆಯಾಗಿದ್ದು, ಮಾ.15ರಂದು ಹಲಸು ಸಂಸ್ಕರಣಾ ಘಟಕದ ಉದ್ಘಾಟನೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ನ್ಯಾಶನಲ್ ಇನ್ಸಿ÷್ಟಟ್ಯೂಟ್ ಆಫ್ ಎಂ.ಎಸ್.ಎA.ಇ ನ ಡೈರೆಕ್ಟರ್ ಜನರಲ್ ಡಾ.ಗ್ಲೋರಿ ಸ್ವರೂಪ್, ಎನ್,ಟಿ ಪೂಜಾರಿ, ಸುಫಲಾ ರೈತ ಉತ್ಪಾದಕ ಕಂಪೆನಿಯ ಆಡಳಿತ ನಿರ್ದೇಶಕ ನವೀನ್ ನಾಯಕ್, ಸುಫಲಾ ರೈತ ಉತ್ಪಾದಕ ಕಂಪೆನಿಯ ಸಿಇಓ ರಮೇಶ್ ಕಾಮತ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ರಾಜ್ಯ ಸರ್ಕಾರದ 5 ಕೋ.ರೂ ಅನುದಾನ ಹಾಗೂ 1.50 ಕೋ.ರೂ ರೈತ ಉತ್ಪಾದಕ ಕಂಪೆನಿಯ ಬಂಡವಾಳದೊAದಿಗೆ ಸುಮಾರು 6.50 ಕೋ,ರೂ ವೆಚ್ಚದಲ್ಲಿ ಈ ಯೋಜನೆ ಸ್ಥಾಪಿಸಲಾಗಿದ್ದು, ಪ್ರಮುಖವಾಗಿ ಹಲಸಿನ ಮೌಲ್ಯವರ್ಧನೆಗೆ ಪೂರಕ ಕ್ರಮಕೈಗೊಳ್ಳಲಾಗುತ್ತದೆ, ಮಾತ್ರವಲ್ಲದೇ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.
ಹಲಸನ್ನು ಮೂರು ವಿಭಾಗವಾಗಿ ವಿಂಗಡಿಸಿ ಒಟ್ಟು 150 ವಿವಿಧ ರೀತಿಯ ಹಲಸಿನ ಖಾದ್ಯಗಳನ್ನು ಉತ್ಪಾದಿಸಲಾಗುತ್ತದೆ. ಸ್ಥಳೀಯವಾಗಿ ರೈತರಿಗೆ ಹಲಸು ಬೆಳೆ ಬೆಳೆಯಲು ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ ಈ ಘಟಕಕ್ಕೆ ಬೇಕಾಗುವ ಶೇ 50ರಷ್ಟು ಹಲಸನ್ನು ನಮ್ಮ ಜಿಲ್ಲೆ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪೂರೈಕೆಯಾಗುತ್ತದೆ ಇನ್ನುಳಿದಂತೆ ಹೊರರಾಜ್ಯಗಳಿಂದ ತರಿಸಿಕೊಂಡು ವರ್ಷಕ್ಕೆ ಬೇಕಾಗುವಷ್ಟು ಹಲಸಿನ ಪಲ್ಪ್ ಶೀತಲೀಕರಣ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗುತ್ತದೆ, ಈ ಮೂಲಕ ವರ್ಷದ 365 ದಿನವೂ ಉದ್ಯೋಗ ನೀಡುವ ಉದ್ದೇಶ ಹೊಂದಿದೆ ಎಂದರು. ನಮ್ಮ ಘಟಕದಲ್ಲಿ ಉತ್ಪಾದನೆಯಾದ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರುಕಟ್ಟೆ ಮಾಡುವುದರ ಜತೆಗೆ ವಿದೇಶಕ್ಕೆ ರಫ್ತು ಮಾಡುವ ಮೂಲಕ ಹಲಸನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನ ನಮ್ಮದಾಗಿದೆ ಎಂದರು.
ಇದಲ್ಲದೇ ಮಾ 16ರಂದು ನಡೆಯುವ ಪ್ರಾದೇಶಿಕ ಕೃಷಿ ಉದ್ಯಮ ಸಮಾವೇಶದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ವಿದ್ಯಾರ್ಥಿಗಳು ಹಾಗೂ ಯುವಜನರಿಗಾಗಿ ಕೃಷಿ ಉದ್ಯಮ ಕಲ್ಪನೆ ಸ್ಪರ್ಧೆ, ಕೃಷಿ ರಸಪ್ರಶ್ನೆ ಸ್ಪರ್ಧೆ, ಸ್ವಸಹಾಯ ಗುಂಪುಗಳಿಗೆ ಹಲಸಿನ ಸಂಸ್ಕರಣೆ ಕುರಿತ ಕಾರ್ಯಾಗಾರ, ಸುಸ್ಥಿರ ಅಡುಗೆ ಅಭ್ಯಾಸಗಳನ್ನು ಉತ್ತೇಜಿಸುವ ನೇರ ಅಡುಗೆ ಸ್ಪರ್ಧೆ ಸೇರಿದಂತೆ ಸ್ಥಳಿಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ರೈತ ಉತ್ಪಾದಕ ಸಂಸ್ಥೆಗಳು, ಆಹಾರ ಸಂಸ್ಕರಣಾ ಘಟಕಗಳ ಉದ್ಯಮಿಗಳು, ಪ್ರಗತಿಪರ ರೈತರು, ಕೃಷಿ ಸಂಶೋಧಕರು, ಸರ್ಕಾರಿ ಹಾಗೂ ಸರ್ಕಾರೇತರ ಸಂಘಸAಸ್ಥೆಗಳ ಸದಸ್ಯರು ಭಾಗವಹಿಸಬಹುದಾಗಿದೆ ಎಂದು ಡಾ.ಎ.ಪಿ ಆಚಾರ್ ಹೇಳಿದರು
ಸುದ್ದಿಗೋಷ್ಠಿಯಲ್ಲಿ ಸುಫಲಾ ರೈತ ಉತ್ಪಾದಕ ಕಂಪೆನಿಯ ಆಡಳಿತ ನಿರ್ದೇಶಕ ನವೀನ್ ನಾಯಕ್, ಸುಫಲಾ ರೈತ ಉತ್ಪಾದಕ ಕಂಪೆನಿಯ ಸಿಇಓ ರಮೇಶ್ ಕಾಮತ್ ಉಪಸ್ಥಿತರಿದ್ದರು
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.