ಕಾರ್ಕಳ: ರಿಕ್ಷಾ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹಸವಾರ ಗಾಯಗೊಂಡ ಘಟನೆ ಮೇ.6 ರಂದು ಸೋಮವಾರ ಮಧ್ಯಾಹ್ನ ಸಂಭವಿಸಿದೆ
ಬೈಕ್ ಸವಾರ ನಿಟ್ಟೆ ಬೊರ್ಗಲ್’ಗುಡ್ಡೆ ನಿವಾಸಿ ರಾಘವೇಂದ್ರ ಹಾಗೂ ಅವರ ಮಗ ಗಾಯಗೊಂಡವರು. ರಾಘವೇಂದ್ರ ಅವರು ತನ್ನ ಮಗನನ್ನು ಬೈಕಿನಲ್ಲಿ ಕೂರಿಸಿಕೊಂಡು ಲೆಮಿನಾ ಕ್ರಾಸ್ ನಿಂದ ಬೊರ್ಗಲ್’ಗುಡ್ಡೆ ಕಡೆಗೆ ಹೋಗುತ್ತಿದ್ದಾಗ ಬೊರ್ಗಲ್’ಗುಡ್ಡೆ ಕಡೆಯಿಂದ ಲೆಮಿನಾ ಕ್ರಾಸ್ ಕಡೆಗೆ ವೇಗವಾಗಿ ಬರುತ್ತಿದ್ದ ರಿಕ್ಷಾ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ರಾಘವೇಂದ್ರ ಹಾಗೂ ಅವರ ಪುತ್ರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
