ಕಾರ್ಕಳ, ಆ. 23; ಸಾಮೂಹಿಕ ಜಾಲತಾಣದಲ್ಲಿ ವಿಶ್ವವಿಖ್ಯಾತ ದಸರಾ ಆಚರಣೆಯ ವಿಚಾರದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಕಾರ್ಕಳ ತಾಲೂಕು ನಿಟ್ಟೆಯ ವ್ಯಕ್ತಿಯ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದೀಪ್ ಶೆಟ್ಟಿ ನಿಡ್ಡೆ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿ ಸುದೀಪ್ ಶೆಟ್ಟಿ ನಿಟ್ಟೆ ಎಂಬಾತ ಜಾತಿ, ಧರ್ಮಗಳ ಮಧ್ಯೆ ವೈಷಮ್ಯ ಹುಟ್ಟಿಸುವ ರೀತಿಯಲ್ಲಿ ಪೋಸ್ಟ್ ಹಾಕಿದ್ದು, ಪೊಲೀಸ್ ಉಪ ನಿರೀಕ್ಷಕರಾದ ಸುಂದರ ಅವರು ಆ.22 ಠಾಣೆಯಲ್ಲಿ ಸೋಷಿಯಲ್ ಮೀಡಿಯಾಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ನಿಟ್ಟೆಯ ಸುದೀಪ್ ಶೆಟ್ಟಿ ಎಂಬಾತನು ಸೋಷಿಯಲ್ ಮೀಡಿಯದಲ್ಲಿ ಸುದೀಪ್ ಶೆಟ್ಟಿ ನಿಟ್ಡೆ ಎಂಬ ಹೆಸರಿರುವ ಫೇಸ್ ಬುಕ್ ಪೇಜ್ ನಲ್ಲಿ ಜಾತಿ, ಧರ್ಮಗಳ ಮಧ್ಯೆ ವೈಷಮ್ಯ, ವೈರತ್ವ ಉಂಟುಮಾಡುವ ರೀತಿ ಪೋಸ್ಟ್ ಹಾಕಿರುವುದಾಗಿ ಮಾಹಿತಿ ದೊರೆತಿದ್ದು, ಸುದೀಪ್ ಶೆಟ್ಟಿ ನಿಟ್ಟೆ ಎಂಬ ಫೇಸ್ ಬುಕ್ ಪೇಜ್ ಸರ್ಚ್ ಮಾಡಿದಾಗ ಬೂಕರ್ ಪ್ರಶಸ್ತಿ ಪುರಸ್ಕ್ರತೆ ಭಾನು ಮುಷ್ತಾಕ್ ಇವರಿಂದ ದಸರಾ ಉದ್ಘಾಟನೆ ಎಂಬುದಾಗಿ ಸಿ ಎಂ ಘೋಷಣೆ ಎಂಬ ಪೋಸ್ಟರ್ಗೆ “ ದಸರಾ ಅನ್ನೋದು ಹಿಂದುಗಳ ಸಾಂಸ್ಕೃತಿಕ ಹಬ್ಬ ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಿಂದೂ ಸಂಪ್ರದಾಯದಂತೆ ನಡೆಯಲ್ಪಡುತ್ತದೆ ಅಂತಹವರಲ್ಲಿ ಸನಾತನ ಹಿಂದೂ ಸಂಸ್ಕೃತಿಯನ್ನು ಒಪ್ಪದ ಆಚರಣೆ ಮಾಡದ ಈಕೆಯಿಂದ ದಸರಾ ಉದ್ಘಾಟನೆ ಮಾಡುವ ದರ್ದು ಏನಿದೆ…..ಹಿಂದೂ ವಿರೋಧಿ ಕಾಂಗ್ರೆಸ್ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರತಿಯೊಂದು ವಿಚಾರದಲ್ಲೂ ಮುಂದಿರುತ್ತದೆ…’’ಎಂಬುದಾಗಿ ಪೋಸ್ಟ್ ಮಾಡಿರುವುದುಡುಬಂದಿದೆ.
ಸುದೀಪ್ ಶೆಟ್ಟಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಪೇಜ್ನಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ, ವೈರತ್ವ ಉಂಟು ಮಾಡುವ ರೀತಿಯಲ್ಲಿ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿರುವುವ ಹಿನ್ನಲೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.