ಹೆಬ್ರಿ :ಹೆಬ್ರಿ ತಾಲೂಕಿನ ಮುದ್ರಾಡಿಯ ಅಭಯಹಸ್ತೆ ಆದಿಶಕ್ತಿ ಶ್ರೀಕ್ಷೇತ್ರದಲ್ಲಿ ಸುಮಾರು 50 ವರ್ಷಗಳ ಹಿಂದಿನ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಧಾರ್ಮಿಕ ಕಾರ್ಯಕ್ರಮವು ಮೇ 13 ಹಾಗೂ14 ರಂದು ನಡೆಯಲಿದೆ.
ಈ ಪ್ರಯುಕ್ತ ಸೋಮವಾರ ಸಂಜೆ 4 ಗಂಟೆಯಿಂದ ಹೆಬ್ರಿ ಕೆಳಪೇಟೆಯಿಂದ ಮುದ್ರಾಡಿಯವರೆಗೆ ಜನಪದ ತಂಡಗಳ ಕುಣಿತ, ಭಜನೆ, ಚೆಂಡೆವಾಧ್ಯಗಳೊಂದಿಗೆ ಕೊರಗಜ್ಜ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ.
ಮೇ 14 ಮಂಗಳವಾರ ಬೆಳಿಗ್ಗೆ ಕೊರಗಜ್ಜನ ಮೂರ್ತಿ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ವ್ಯಾಘ್ರಚಾಮುಂಡಿ, ಬಂಟ, ಜಾಲ ಬೈಕಡ್ತಿ, ಬೊಬ್ಬರ್ಯ, ಮಲೆಸಾವಿರ ಮತ್ತು ಕೊರಗಜ್ಜನ ಕೋಲ ನಡೆಯಲಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ್ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






