
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.






ಕಾರ್ಕಳ: ಬೈಕಿಗಾಗಿ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಗೆ OLX ನಲ್ಲಿ ಅನಾಮಧೇಯ ವಂಚಕನೋರ್ವ ಬರೋಬ್ಬರಿ 1 ಲಕ್ಷ ರೂ ಮಿಕ್ಕಿ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ವಿವರ: ಕಾರ್ಕಳದ ಇರ್ಫಾನ್ ಎಂಬವರು ಕಳೆದ ಕೆಲ ತಿಂಗಳ ಹಿಂದೆ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಹಾಗೂ ಖರೀದಿಯ OLX ಆ್ಯಪ್ ನಲ್ಲಿ ಬೈಕ್ ಖರೀದಿಸುವ ಸಲುವಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸಿಕ್ಕಿದ ಮೊಬೈಲ್ ನಂಬರಿಗೆ ಕರೆಮಾಡಿ ಬೈಕ್ ಬಗ್ಗೆ ಮಾಹಿತಿ ಕೇಳಿದಾಗ ಆ ವ್ಯಕ್ತಿ ತಾನು ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡಿಕೊಂಡಿದ್ದು ತಾನು ಬೈಕ್ ಮಾರಾಟ ಮಾಡುತ್ತೇನೆ ಎಂದು ಹೇಳಿ ಬೈಕಿನ ಫೋಟೋ ಮತ್ತು ವಿವರವನ್ನು ಇರ್ಫಾನ್ ಅವರ ಮೊಬೈಲಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದನ್ನು ನೋಡಿದ ಇರ್ಫಾನ್ ಬೈಕ್ ಖರೀದಿಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದರು. ಬಳಿಕ ಅನಾಮಧೇಯ ವಂಚಕ ಆತನ ಬ್ಯಾಂಕ್ ಖಾತೆಯ ವಿವರ ನೀಡಿ ಹಣ ಜಮಾವಣೆ ಮಾಡಿದರೆ ಸಂಜೆಯೊಳಗಾಗಿ ಬೈಕನ್ನು ಮನೆಗೆ ಡೆಲಿವರಿ ನೀಡುವುದಾಗಿ ನಂಬಿಸಿದ್ದ. ಈತನ ಮಾತಿನಂತೆ ಇರ್ಫಾನ್ ವಂಚಕನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು 1,18,139 ರೂಪಾಯಿ ಹಣವನ್ನು ವರ್ಗಾಯಿಸಿದ್ದರೂ ವಂಚಕ ಬೈಕನ್ನು ನೀಡದೇ ಹಣ ನೀಡದೇ ಮೋಸ ಮಾಡಿರುವ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.





