ಕಾರ್ಕಳ: ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಸೈಬರ್ ವಂಚಕರು ಯುವಕನಿಗೆ ಬರೋಬ್ಬರಿ 90 ರೂಪಾಯಿ ಪಂಗನಾಮ ಹಾಕಿದ ಪ್ರಕರಣ ವರದಿಯಾಗಿದೆ. ಕಾರ್ಕಳ ಸಂದೀಪ್ ಎಂಬವರು ಹಣ ಕಳೆದುಕೊಂಡ ಯುವಕ.
ಸಂದೀಪ್ ಎಂಬವರು ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಸುಮಾರು 3 ತಿಂಗಳ ಹಿಂದೆ ಯುಟ್ಯೂಬ್ ನಲ್ಲಿ ಹಣ ದ್ವಿಗುಣಗೊಳಿಸುವ ಬಿಎಚ್‌ಎಸ್ ಮನಿ ಮೇಕಿಂಗ್ ಆ್ಯಪ್ ಡೌನ್‌ಲೋಡ್ ಮಾಡಿದ ಬಳಿಕ ಆ ಕಂಪೆನಿಯ ವಂಚಕ, ಸಂದೀಪ್ ಅವರ ಮೊಬೈಲಿಗೆ ವಾಟ್ಸಾಪ್ ಸಂದೇಶ ಹಾಕಿ ನೀವು 90 ಸಾವಿರ ಹಣ ಹಾಕಿದರೆ ಪ್ರತಿದಿನ 10560 ರೂ ನಂತೆ ಒಟ್ಟು 88 ದಿನ ಹಣ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ನಂಬಿಸಿದ್ದ. ಇದಾದ ಬಳಿಕ ವಂಚಕನ ಮಾತು ನಂಬಿದ್ದ ಸಂದೀಪ್ ಇದೇ ಆ್ಯಪ್ ಮೂಲಕ ಜ.31 ರಂದು 30 ಸಾವಿರ ಹಾಗೂ ಫೆ.2 ರಂದು 60 ಸಾವಿರ ನಗದನ್ನು ವರ್ಗಾವಣೆ ಮಾಡಿದ್ದರು. ಇತ್ತ ಸಂದೀಪ್ ಹಣ ವರ್ಗಾವಣೆ ಮಾಡಿದ ಬಳಿಕ ವಂಚಕ ಹಣ ಹಾಕದೇ ನೈಸಾಗಿ ಉಂಡೆನಾಮ ತಿಕ್ಕಿದ್ದಾನೆ. ಹಣ ಕಳೆದುಕೊಂಡ ಸಂದೀಪ್ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ
ಕಳೆದ ಕಳೆವು ತಿಂಗಳಿನಿAದ ಕಾರ್ಕಳ ತಾಲೂಕಿನಲ್ಲಿ ಇಂತಹ ಆನ್ ಲೈನ್ ವಂಚನೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಯುವಕರು ಹಣದ ಆಸೆಗೆ ವಂಚಕರ ಜಾಲಕ್ಕೆ ಸಿಲುಕಿ ಹಣಕಳೆದುಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಸ.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.