ಕುಚ್ಚೂರು : 27ನೇ ವರ್ಷದ ಸಾರ್ವಜನಿಕ ಗಣೇಶೊತ್ಸವ

ಹೆಬ್ರಿ : ತಾಲೂಕಿನ ಕುಚ್ಚೂರಿನಲ್ಲಿ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವೈಭವದಿಂದ ನಡೆಯಿತು. ಗಣಪತಿ ಪ್ರತಿಷ್ಠಾಪನೆ, ಗಣಹೋಮ, ಮೂಡುಗಣಪತಿ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಭಾ ಕಾರ್ಯಕ್ರಮದಲ್ಲಿ ಕುಚ್ಚೂರು ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಹರಿದಾಸ ಶೆಟ್ಟಿ…

ಚೈತ್ರಾ ಕುಂದಾಪುರ​ ಗ್ಯಾಂಗ್ ವಂಚನೆ ಪ್ರಕರಣ : ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಒಡಿಶಾದಲ್ಲಿ ಬಂಧನ

ಬೆಂಗಳೂರು: ಎಂಎಲ್​ಎ ಟಿಕೆಟ್​ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಲಶ್ರೀ ಕೊನೆಗೆ ಸಿಕ್ಕಿದ್ದಿದ್ದಾನೆ. ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀಯನ್ನು…

ನೂತನ ಸಂಸತ್ ಭವನದಲ್ಲಿ  ಇಂದಿನಿಂದ ಲೋಕಸಭಾ ವಿಶೇಷ ಅಧಿವೇಶನ: ಲೋಕಸಭೆ ಹಾಗೂ ರಾಜ್ಯ ಸಭೆಗಳಲ್ಲಿ ಮಹಿಳೆಯ ಮೀಸಲಾತಿ ಮಿತಿ 33% ಹೆಚ್ಚಳಕ್ಕೆ ಕೇಂದ್ರ ಸರ್ಕಾರ ತೀರ್ಮಾನ

ನವದೆಹಲಿ: ಕೇಂದ್ರ ಸರ್ಕಾರ ಕರೆದ ವಿಶೇಷ ಅಧಿವೇಶನ ಈಗಾಗಲೇ ಆರಂಭಗೊಂಡಿದ್ದು,ಇಂದಿನಿಂದ ಹೊಸ ಸಂಸತ್ತಿಲ್ಲಿ ಅಧಿವೇಶನ ನಡೆಯಲಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ…

ಹಾಲು ಮಾರಾಟಗಾರರು ಹಾಗೂ ವಿತರಕರಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲಸೌಲಭ್ಯ:ಕೇಂದ್ರ ಸರ್ಕಾರಕ್ಕೆ ಸಾಣೂರು ನರಸಿಂಹ ಕಾಮತ್ ಶ್ಲಾಘನೆ

ಕಾರ್ಕಳ:ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಆತ್ಮ ನಿರ್ಭರ ನಿಧಿ (ಪಿಎಂ ಸ್ವನಿಧಿ)ಯೋಜನೆಯಡಿಯಲ್ಲಿ ಹಾಲು ಮಾರಾಟ ಮತ್ತು ಹಂಚಿಕೆ ಮಾಡುವವರನ್ನು ಬೀದಿ ಬದಿ ವ್ಯಾಪಾರಿಗಳೆಂದು ಪರಿಗಣಿಸಿ ಈ ಯೋಜನೆಯ ವ್ಯಾಪ್ತಿಗೆ ತಂದಿರುವುದು ದೇಶದ ಕೋಟ್ಯಾಂತರ ಮಂದಿಗೆ ಜೀವನೋಪಾಯವಾಗಿರುವ ಮನೆಮನೆಗೆ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:19.09.2023, ಮಂಗಳವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು, ಭಾದ್ರಪದ ಮಾಸ(ಕನ್ಯಾ) ಶುಕ್ಲಪಕ್ಷ, ನಕ್ಷತ್ರ:ಸ್ವಾತಿ, ರಾಹುಕಾಲ 03:37 ರಿಂದ 04:58 ಗುಳಿಕಕಾಲ-12:25 ರಿಂದ 01:56 ಸೂರ್ಯೋದಯ (ಉಡುಪಿ) 06:22 ಸೂರ್ಯಾಸ್ತ – 06:28 ದಿನವಿಶೇಷ: ಗಣೇಶಚತುರ್ಥಿ ರಾಶಿ ಭವಿಷ್ಯ: ಮೇಷ…

ಉದ್ಯಮಿಗೆ ಹಣ ವಂಚನೆ ಪ್ರಕರಣದ ಆರೋಪಿ ಚೈತ್ರಾ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲು : ಬಟ್ಟೆ ಅಂಗಡಿ ಇಟ್ಟು ಕೊಡುವುದಾಗಿ ಹೇಳಿ 5 ಲಕ್ಷ ವಂಚನೆ

ಉಡುಪಿ : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ 5 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸಿ‌ ಸಿಸಿಬಿಯಿಂದ ಈಗಾಗಲೇ ಬಂಧಿತಳಾದ ಆರೋಪಿ ಚೈತ್ರಾ ಕುಂದಾಪುರ ವಿರುದ್ಧ ಕುಂದಾಪುರ ತಾಲೂಕಿನ ಕೋಟ ಪೊಲೀಸ್ ಠಾಣೆಯಲ್ಲಿ ಮತ್ತೊಂದು…

ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ : ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸ್ಪಷ್ಟನೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಕುರಿತಂತೆ ದೆಹಲಿಯಲ್ಲಿ ಸೋಮವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರ‌ ಜತೆ ಮಾತನಾಡಿದ ದೇವೇಗೌಡ,ನಾನು ಈ ವಿಚಾರವಾಗಿ ಪ್ರತ್ಯೇಕವಾಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿಲ್ಲ…

ಸಂಸದ ಪ್ರಜ್ವಲ್ ರೇವಣ್ಣಗೆ ತಾತ್ಕಾಲಿಕ ರಿಲೀಫ್: ಹೈಕೋರ್ಟ್‌ ಅಮಾನತು ಆದೇಶ ತಡೆಹಿಡಿದ ಸುಪ್ರೀಂ

ನವದೆಹಲಿ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಸ್ಥಾನ ಅನರ್ಹಗೊಳಿಸಿ ಕರ್ನಾಟಕ ಹೈಕೋರ್ಟ್​ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ಪ್ರಜ್ವಲ್ ರೇವಣ್ಣಗೆ ಬಿಗ್​ ರಿಲೀಫ್ ಸಿಕ್ಕಂತಾಗಿದ್ದು, ಸಂಸದ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ…

ಸೂರ್ಯಯಾನದ ಪಥ ಆರಂಭ: ಇಂದು ರಾತ್ರಿ ಭೂಮಿಯನ್ನು ತೊರೆಯಲಿದೆ ಆದಿತ್ಯ ಎಲ್-1 ನೌಕೆ

ಬೆಂಗಳೂರು: ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ವೀಕ್ಷಣಾಲಯ, ಆದಿತ್ಯ-ಎಲ್ 1, ತನ್ನ ಕಾರ್ಯಾಚರಣೆಯ ಮಹತ್ವದ ಹಂತವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿಯಲ್ಲಿ ಬಾಹ್ಯಾಕಾಶ ನೌಕೆಯು ಟ್ರಾನ್ಸ್-ಲಗ್ರಾಂಜಿಯನ್ ಪಾಯಿಂಟ್ 1 ಅಳವಡಿಕೆಗೆ ಒಳಗಾಗಲಿದೆ ಎಂದು ಇಸ್ರೋ ಹೇಳಿದೆ. ಟಿಎಲ್1…

ವಿದೇಶದಿಂದಲೇ ವಾಟ್ಸಾಪ್ ಮೂಲಕ ಪತ್ನಿಗೆ ತಲಾಖ್!: ಪತಿ ವಿರುದ್ಧ ದೂರು ದಾಖಲು

ಸುಳ್ಯ: ವಿದೇಶದಲ್ಲಿರುವ ಪತಿ ವಾಟ್ಸಪ್ ಸಂದೇಶದ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಸುಳ್ಯ ಜಯನಗರದಲ್ಲಿ ನಡೆದಿದೆ. ಕೇರಳ ತ್ರಿಶೂರ್ ಮೂಲದ ಅಬ್ದುಲ್ ರಶೀದ್ ತನ್ನ ಪತ್ನಿಗೆ ವಾಟ್ಸಪ್ ಮೂಲಕ ತಲಾಖ್ ನೀಡಿದ್ದು ಈ ಬಗ್ಗೆ ಪತ್ನಿ ಸುಳ್ಯ ಪೊಲೀಸ್…