ಹೆಬ್ರಿ : ವೃದ್ಧ ಬಾವಿಗೆ ಹಾರಿ ಆತ್ಮಹತ್ಯೆ
ಹೆಬ್ರಿ : ಹೆಬ್ರಿ ತಾಲೂಕಿನ ಚಾರಾ ಗ್ರಾಮದ ಚಾರಹಸಿಕೋಡ್ಲು ಎಂಬಲ್ಲಿ ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡಿಯ ಮರಕಾಲ (82ವ) ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ ನೆನಪಿನ ಶಕ್ತಿ ಕಡಿಮೆ ಇದ್ದು ಅದೇ ಕಾರಣಕ್ಕೆ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಜೀವನದಲ್ಲಿ…
ಕಾರ್ಕಳದಲ್ಲಿ ಗಣಿಗಾರಿಕೆ ವೇಳೆ ಸ್ಫೋಟದಿಂದ ಕಾರ್ಮಿಕ ಸಾವು ಪ್ರಕರಣ:ಅನಾಹುತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಎಂ ಗೆ ಶುಭದ ರಾವ್ ಮನವಿ
ಕಾರ್ಕಳ: ಕಳೆದ ಹಲವು ವರ್ಷಗಳಿಂದ ಕಾರ್ಕಳ ತಾಲೂಕಿನಲ್ಲಿ ನಡೆಯುವ ಅಕ್ರಮ ಕಲ್ಲು ಗಣಿಗಾರಿಕೆಗೆ ಒಬ್ಬ ಅಮಾಯಕ ಬಲಿಯಾಗಿದ್ದು, ಈ ಅನಾಹುತಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ, ಇಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಜರುಗಿಸುವಂತೆ ಆಗ್ರಹಿಸಿ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗುವುದೆಂದು ಕಾರ್ಕಳ…
ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ: ಮಾಜಿ ಸಚಿವ ಸುನಿಲ್ ಕುಮಾರ್ ಆಕ್ರೋಶ
ಬೆಂಗಳೂರು :ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪಯೋಜನೆಯಡಿ ಮೀಸಲಿರಿಸಿದ ಅನುದಾನದಲ್ಲಿ 11 ಸಾವಿರ ಕೋಟಿ ರೂ.ನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ವಿ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.…
ಕಾರ್ಕಳ : ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ
ಕಾರ್ಕಳ: ಕಸ್ತೂರಿ ರಂಗನ್ ವರದಿಯ ಯಥಾವತ್ ಜಾರಿಯಿಂದ ರೈತರಿಗೆ ಅನೇಕ ಸಮಸ್ಯೆಗಳಾಗುತ್ತವೆ. ಈ ವಿಚಾರವಾಗಿ ಭಾರತೀಯ ಕಿಸಾನ್ ಸಂಘವು ವರದಿಯ ಅಧ್ಯಯನ ನಡೆಸಿ ಈಗಾಗಲೇ ಹಲವು ಬಾರಿ ರೈತರೊಂದಿಗೆ ಚರ್ಚೆ ನಡೆಸಿ ಅದರಲ್ಲಿ ಕೈಬಿಡಬೇಕಾದ ಮತ್ತು ಬದಲಾವಣೆ ಮಾಡಬೇಕಾದ ಅಂಶಗಳ ಬಗ್ಗೆ…
ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನೀಸ್ ಪಂದ್ಯಾವಳಿ: ಎಕ್ಸಲೆಂಟ್ ಮೂಡುಬಿದಿರೆ ಸಮಗ್ರ ಚಾಂಪಿಯನ್
ಮೂಡಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಮೂಡುಬಿದಿರೆ ತಾಲೂಕು ಮಟ್ಟದ 14 ಮತ್ತು 17 ವಯೋಮಾನದ ಬಾಲಕ ಬಾಲಕಿಯರ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು…
ಕಾರ್ಕಳ:ಕಾರು ತಡೆದು ಯುವಕರಿಂದ ನೈತಿಕ ಪೊಲೀಸ್ ಗಿರಿ:ಐವರು ಯುವಕರ ಬಂಧನ
ಕಾರ್ಕಳ : ನೈತಿಕ ಪೊಲೀಸ್ ಗಿರಿ ನಡೆಸಿದ ಐವರು ಯುವಕರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಹೆಸರಾಂತ ಕಾಲೇಜೊಂದರ ನಾಲ್ವರು ವೈದ್ಯರು ಹಾಗೂ ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಗಳು ರವಿವಾರದಂದು ಒಂದೇ ಕಾರಿನಲ್ಲಿ ಮಂಗಳೂರಿನಿಂದ ಶೃಂಗೇರಿಗೆ ತೆರಳಿ ಸಂಜೆ…
ರಾಜ್ಯದಲ್ಲಿ ಆನ್‌ಲೈನ್ ಗೇಮ್, ಬೆಟ್ಟಿಂಗ್ ನಿಷೇಧಕ್ಕೆ ಚಿಂತನೆ: ಸಿಎಂ ಸಿದ್ದರಾಮಯ್ಯ
ಮಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಗೇಮ್, ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಗರದ ಜಿಲ್ಲಾ ಪಂಚಾಯತ್‌ನಲ್ಲಿ ಮಂಗಳವಾರ ದ.ಕ. ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:02.08.2023, ಬುಧವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ, ವರ್ಷ ಋತು,ಕರ್ಕಾಟಕ ಮಾಸ ಕೃಷ್ಣಪಕ್ಷ, ನಕ್ಷತ್ರ:ಶ್ರವಣ , ರಾಹುಕಾಲ 12:37 ರಿಂದ 02:12 ಗುಳಿಕಕಾಲ-11:02 ರಿಂದ 12:37 ಸೂರ್ಯೋದಯ (ಉಡುಪಿ) 06:17 ಸೂರ್ಯಾಸ್ತ – 06:57 ರಾಶಿ ಭವಿಷ್ಯ: ಮೇಷ ರಾಶಿ…
ನಾಲ್ಕೂರು: ನೀರಿನ ಹೊಂಡಕ್ಕೆ ಬಿದ್ದು 3ರ ಹರೆಯದ ಪುಟಾಣಿ ಬಾಲಕಿ ಸಾವು
ಹೆಬ್ರಿ: ತನ್ನ ಅಜ್ಜಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಮೂರು ವರ್ಷದ ಪುಟಾಣಿ ಮಗುವನ್ನು ಆಯತಪ್ಪಿ ನೀರಿನ ಹೊಂಡಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಉಡುಪಿ ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆ ಅರೆಮನೆ ಜಡ್ಡು ಎಂಬಲ್ಲಿ ನಡೆದಿದೆ ನಾಲ್ಕೂರು ಗ್ರಾಮದ…
ಕಾರ್ಕಳ ಗುಂಡ್ಯಡ್ಕ ಕಲ್ಲುಕೋರೆಯಲ್ಲಿ ಬಾಗಲಕೋಟೆ ಮೂಲದ ಕಾರ್ಮಿಕ ಅನುಮಾನಾಸ್ಪದ ಸಾವು: ಕಲ್ಲುಗಣಿಗಾರಿಕೆ ಸ್ಪೋಟದಿಂದ ದುರಂತ?
ಕಾರ್ಕಳ:ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಕಲ್ಲಿನ ಕೋರೆಯಲ್ಲಿ ಕಾರ್ಮಿಕನೋರ್ವ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಬಾಗಲಕೋಟೆ ಮೂಲದ ಕಾರ್ಮಿಕ ವೆಂಕಟೇಶ್(32) ಎಂಬವರು ಮೃತಪಟ್ಟಿದ್ದು, ಕಲ್ಲುಗಣಿಗಾರಿಕೆ ಸಂದರ್ಭದಲ್ಲಿ ನಡೆಸಿದ ಸ್ಪೋಟದಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.…
