ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:31.07.2023, ಸೋಮವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ, ವರ್ಷ ಋತು,ಕರ್ಕಾಟಕ ಮಾಸ ಶುಕ್ಲಪಕ್ಷ, ನಕ್ಷತ್ರ:ಪೂರ್ವಾಷಾಢ , ರಾಹುಕಾಲ 07:52 ರಿಂದ 09:27 ಗುಳಿಕಕಾಲ-02:12 ರಿಂದ 03:48, ಸೂರ್ಯೋದಯ (ಉಡುಪಿ) 06:16 ಸೂರ್ಯಾಸ್ತ – 06:57 ರಾಶಿ ಭವಿಷ್ಯ: ಮೇಷ ರಾಶಿ…
ಕಲ್ಲಡ್ಕ: ಖಾಸಗಿ ಬಸ್- ಬೈಕ್ ಡಿಕ್ಕಿ: ಸವಾರ ದಾರುಣ ಸಾವು
ಬಂಟ್ವಾಳ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಕಲ್ಲಡ್ಕ ಎಂಬಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಮೃತಪಟ್ಟ ಬೈಕ್ ಸವಾರನನ್ನು ಕಲ್ಲಡ್ಕದ ಗೋಳ್ತಮಜಲು ಮುರಬೈಲು ನಿವಾಸಿ ಲತೀಶ್(29) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ…
ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳಬಾರದು : ಮಾಜಿ ಸಚಿವ ಸುನಿಲ್ ಕುಮಾರ್ ಆಗ್ರಹ
ಕಾರ್ಕಳ : ಕಸ್ತೂರಿ ರಂಗನ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆಯವರು ನೀಡಿರುವ ಹೇಳಿಕೆ ಕಳವಳಕ್ಕೆ ಕಾರಣವಾಗಿದ್ದು ಸರ್ಕಾರ ಈ ವಿಚಾರದಲ್ಲಿ ಆತುರದ ನಿರ್ಣಯ ತೆಗೆದುಕೊಳ್ಳಬಾರದು ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.…
ಅಜೆಕಾರು: ಲಯನ್ಸ್ ಕ್ಲಬ್ ವತಿಯಿಂದ ಉಚಿತ ಫಿಸಿಯೋಥೆರಪಿ ಚಿಕಿತ್ಸೆ
ಅಜೆಕಾರು: ಲಯನ್ಸ್ ಕ್ಲಬ್ ಅಜೆಕಾರು,ಕ್ಯಾಥೊಲಿಕ್ ಸಭಾ ಹಾಗೂ ಮರ್ಣೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕಂಪಾನಿಯೋ ವೆಲ್ ನೆಸ್ ಸೆಂಟರ್ ಉಡುಪಿ ವತಿಯಿಂದ ಜುಲೈ 26 ರಿಂದ ಒಂದು ತಿಂಗಳ ಕಾಲ ಸಾರ್ವಜನಿಕರಿಗಾಗಿ ಉಚಿತ ಫಿಜಿಯೋಥೆರಪಿ ಶಿಬಿರವನ್ನು ಅಜೆಕಾರು ಕೈಕಂಬದ ಆಶೀರ್ವಾದ್ ಕಾಂಪ್ಲೆಕ್ಸ್…
ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಗೌರವಾಧ್ಯಕ್ಷರಾಗಿ ಸಿದ್ಧಲಿಂಗ ಸ್ವಾಮೀಜಿ ನೇಮಕ: ಮುತಾಲಿಕ್ ಸ್ಪಷ್ಟನೆ-ರಾಜಿನಾಮೆ ಊಹಾಪೋಹಗಳಿಗೆ ತೆರೆ ಎಳೆದ ಮುತಾಲಿಕ್
ಹಾವೇರಿ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಈ ಕುರಿತಂತೆ ಪ್ರಮೋದ್ ಮುತಾಲಿಕ್ ಅವರು ಸ್ಪಷ್ಟನೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಅಭ್ಯಾಸ ವರ್ಗದಲ್ಲಿ ಸಂಘಟನೆಯಲ್ಲಿ ಕೆಲವೊಂದು…
ಅರಶಿನಗುಂಡಿ ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದ ಶರತ್ ಮೃತದೇಹ ಪತ್ತೆ
ಕುಂದಾಪುರ: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಆಕಸ್ಮಿಕವಾಗಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಭದ್ರಾವತಿ ಮೂಲದ ಯುವಕ ಶರತ್ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್ ನಗರ ಸುಣ್ಣದ ಹಳ್ಳಿ ನಿವಾಸಿ…
ಬೆಂಗಳೂರು ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ನಿಂದ ಕಂಬಳದ ವೇಗದ ಓಟಗಾರ ಶ್ರೀನಿವಾಸ ಗೌಡಗೆ ಗೌರವ
ಮೂಡುಬಿದಿರೆ: ಬೆಂಗಳೂರು ಮ್ಯಾನೇಜ್ ಮೆಂಟ್ ಅಸೋಸಿಯೇಶನ್ 66 ನೇ ವರ್ಷದ 2023 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಹಾಗೂ ಸದಸ್ಯರ ದಿನವು ಶನಿವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೇಲ್ ನಲ್ಲಿ ನಡೆಯಿತು. ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕ್ರೀಡಾ…
ಮಂಗಳೂರು : ಮಳೆ ಕಡಿಮೆಯಾದರೂ ನಿಲ್ಲದ ಕಡಲ ಅಬ್ಬರ : ಬೀಚ್‌ಗಳಿಗೆ ಪ್ರವಾಸಿಗರಿಗೆ ನಿರ್ಬಂಧ
ಮಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಮಂಗಳೂರಿನಲ್ಲಿ ಪ್ರಕ್ಷುಬ್ಧಗೊಂಡ ಕಡಲು ಮಳೆ ತಗ್ಗಿದರೂ ಕಡಲ ಅಬ್ಬರ ನಿಲ್ಲದ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ಬೀಚ್‌ಗಳಿಗೆ ನಿರ್ಬಂಧಿಸಲಾಗಿದೆ. ಮಂಗಳೂರಿನ ಎಂಟು ಬೀಚ್ ಗಳಿಗೆ ನಿರ್ಬಂಧ ವಿಧಿಸಿ…
ಅಜೆಕಾರು ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ- ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸುವುದೇ ಲಯನ್ಸ್ ಕ್ಲಬ್ ನ ಮುಖ್ಯ ಉದ್ದೇಶ:ಲಯನ್ಸ್ ಪ್ರಾಂತೀಯ ಮಾಜಿ ಅಧ್ಯಕ್ಷ ಶಂಕರ ಶೆಟ್ಟಿ
ಕಾರ್ಕಳ: ವಿಶ್ವಸಂಸ್ಥೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಏಕೈಕ ಸರ್ಕಾರೇತರ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ ಇಂದು ಜಗತ್ತಿನಾದ್ಯಂತ ಸುಮಾರು 210 ರಾಷ್ಟ್ರಗಳಲ್ಲಿ 48 ಸಾವಿರ ಕ್ಲಬ್ ಹೊಂದಿದ್ದು,ಸುಮಾರು 13 ಲಕ್ಷ ಕ್ಕೂ ಮಿಕ್ಕಿ ಸದಸ್ಯರನ್ನೊಳಗೊಂಡಿದೆ.ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ನಡೆಸುವ ಜತೆಗೆ ನೊಂದವರ ಅಶಕ್ತರ…
ಕಾರ್ಕಳ: ಮಾಜಿ ಪುರಸಭಾ ಸದಸ್ಯ, ಸಾಯಿ ಮಂದಿರ ಸಂಸ್ಥಾಪಕ, ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಚಂದ್ರಹಾಸ ಸುವರ್ಣ ಹೃದಯಾಘಾತದಿಂದ ನಿಧನ
ಕಾರ್ಕಳ: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಸಾಯಿ ಮಂದಿರದ ಸಂಸ್ಥಾಪಕ ಪೆರ್ವಾಜೆ ಮುದ್ದಣನಗರದ ನಿವಾಸಿ ಚಂದ್ರಹಾಸ ಸುವರ್ಣ(67) ಭಾನುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಂದ್ರಹಾಸ ಸುವರ್ಣ ಅವರು ಭಾನುವಾರ ಮುಂಜಾನೆ ನಿತ್ಯದ ವಾಕಿಂಗ್ ಮುಗಿಸಿ ಮನೆಗೆ ಬಂದ…
