ಕಾರ್ಕಳ: ಮಾಜಿ ಪುರಸಭಾ ಸದಸ್ಯ, ಸಾಯಿ ಮಂದಿರ ಸಂಸ್ಥಾಪಕ, ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಚಂದ್ರಹಾಸ ಸುವರ್ಣ ಹೃದಯಾಘಾತದಿಂದ ನಿಧನ
ಕಾರ್ಕಳ: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಸಾಯಿ ಮಂದಿರದ ಸಂಸ್ಥಾಪಕ ಪೆರ್ವಾಜೆ ಮುದ್ದಣನಗರದ ನಿವಾಸಿ ಚಂದ್ರಹಾಸ ಸುವರ್ಣ(67) ಭಾನುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಂದ್ರಹಾಸ ಸುವರ್ಣ ಅವರು ಭಾನುವಾರ ಮುಂಜಾನೆ ನಿತ್ಯದ ವಾಕಿಂಗ್ ಮುಗಿಸಿ ಮನೆಗೆ ಬಂದ…
ಮಂಗಳೂರು ಕುಕ್ಕರ್ ಬಾಂಬ್ ಸ್ಫೊಟ ಪ್ರಕರಣ: ಶಿವಮೊಗ್ಗಕ್ಕೆ ಶಂಕಿತ ಉಗ್ರರ ಕರೆತಂದು ಎನ್‌ಐಎ ಶೋಧ
ಶಿವಮೊಗ್ಗ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿದAತೆ ಎನ್‌ಐಎ ತಂಡ ಶಿವಮೊಗ್ಗ-ತೀರ್ಥಹಳ್ಳಿಯಲ್ಲಿ ಸ್ಥಳ ಮಹಜರು ನಡೆಸಿದೆ ಎಂದು ತಿಳಿದುಬಂದಿದೆ. ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿಗಳಾದ ಮಾಝ್, ಶಾರೀಕ್, ಯಾಸಿನ್‌ನನ್ನು ಮೂರು ದಿನಗಳ ಹಿಂದೆ ಶಿವಮೊಗ್ಗಕ್ಕೆ ಕರೆತಂದಿದ್ದ ಎನ್‌ಐಎ ತಂಡ ಶಿವಮೊಗ್ಗದ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:30.07.2023, ಭಾನುವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ, ವರ್ಷ ಋತು,ಕರ್ಕಾಟಕ ಮಾಸ ಶುಕ್ಲಪಕ್ಷ, ನಕ್ಷತ್ರ:ಮೂಲಾ , ರಾಹುಕಾಲ 05:23 ರಿಂದ 06:58 ಗುಳಿಕಕಾಲ-03:47 ರಿಂದ 05:23, ಸೂರ್ಯೋದಯ (ಉಡುಪಿ) 06:16 ಸೂರ್ಯಾಸ್ತ – 06:57 ರಾಶಿ ಭವಿಷ್ಯ: ಮೇಷ ರಾಶಿ…
ಉಳ್ಳಾಲ :ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ- ಆರೋಪಿ ಮಹಮ್ಮದ್ ಶಾಫಿ ಬಂಧನ
ಮಂಗಳೂರು: ಉಳ್ಳಾಲದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಎಂಟನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಯಾನೆ ಶಾಫಿ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಗೆ ಮಹಮ್ಮದ್ ಶಾಫಿ ಎಂಬವನ ಪರಿಚಯವಿದ್ದು ಕಳೆದ…
ದೇಶದಲ್ಲಿ ಅಶಾಂತಿ, ಕೋಮುದಳ್ಳುರಿ ಸೃಷ್ಟಿಸಿ ಅಧಿಕಾರ ಪಡೆಯುವುದೇ ಬಿಜೆಪಿ ಗುರಿ: ಬಿಪಿನ್ ಚಂದ್ರ ಪಾಲ್
ಕಾರ್ಕಳ : ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷವನ್ನು ನಿಯಂತ್ರಣ ತರುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಅತ್ಯಾಚಾರ ನಡೆಸಿರುವ ಹೇಯಕೃತ್ಯದಿಂದಾಗಿ ನಮ್ಮ ದೇಶ ವಿಶ್ವದ ಎದುರು ದೇಶ ತಲೆ ತಗ್ಗಿಸುವಂತಾಗಿದೆ. ಈ ಘಟನೆಗೆ ಪ್ರಧಾನಿ…
ಉಡುಪಿ ಖಾಸಗಿ ಕಾಲೇಜಿನಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣ : ತನಿಖಾಧಿಕಾರಿ ಬದಲಾಯಿಸಿದ ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ
ಉಡುಪಿ : ಉಡುಪಿಯ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ವಿವಾದ ರಾಜ್ಯಾದ್ಯಂತ ಕೋಲಾಹಲ ಎಬ್ಬಿಸಿದೆ. ಇದೀಗ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ಅವರನ್ನು ಬದಲಾಯಿಸಿ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ…
ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಪ್ರತಿ ಮಂಗಳವಾರ ಪ್ರಸೂತಿತಜ್ಞ ಡಾ. ಪ್ರತಾಪ್ ಕುಮಾರ್ ಎನ್ ಸಮಾಲೋಚನೆಗೆ ಲಭ್ಯ
ಕಾರ್ಕಳ: ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಯು ತನ್ನ ಹೆಸರಾಂತ ಆರೋಗ್ಯ ತಜ್ಞರ ಸಮಿತಿಗೆ ಹೊಸ ತಜ್ಞರ ಸೇರ್ಪಡೆಯನ್ನು ಪ್ರಕಟಿಸಿದೆ. ಆಗಸ್ಟ್ 1ರಿಂದ ಪ್ರಸಿದ್ಧ ಸಂತಾನೋತ್ಪತ್ತಿ ಮತ್ತು ಶಸ್ತ್ರಚಿಕಿತ್ಸಕ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಂತಾನೋತ್ಪತ್ತಿ ಮತ್ತು ಶಸ್ತ್ರಚಿಕಿತ್ಸಾ…
ಕಟೀಲು: ಆಟಿದ ನೆಂಪು ಕಾರ್ಯಕ್ರಮ- ಇಂದಿನ ಮಕ್ಕಳಿಗೆ ಸಂಸ್ಕೃತಿಯ ತಿಳುವಳಿಕೆ ಅಗತ್ಯ : ಉಮಾನಾಥ ಕೋಟ್ಯಾನ್
ಕಟೀಲು: ಆಟಿಯ ಅಂದಿನ ಕಷ್ಠದ ದಿನಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಯಪಡಿಸುವುದು ಅಭಿನಂದನೀಯ. ಇಂದಿನ ಮಕ್ಕಳಿಗೆ ನಮ್ಮ ಸಂಸ್ಕ್ರತಿಯ ತಿಳುವಳಿಕೆ ಅಗತ್ಯ ಆ ಕೆಲಸವನ್ನು ಹಿರಿಯರಾದ ನಾವು ಮಾಡಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಕಟೀಲು…
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿಟಿ ರವಿಗೆ ಕೊಕ್- ಒಲಿಯುತ್ತಾ ರಾಜ್ಯಾಧ್ಯಕ್ಷ ಪಟ್ಟ?
ನವದೆಹಲಿ: ಭಾರತೀಯ ಜನತಾ ಪಕ್ಷ ತನ್ನ ರಾಷ್ಟ್ರೀಯ ಮಂಡಳಿಯನ್ನು ಪುನರ್ ರಚಿಸಿ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ.ರವಿಗೆ ಅವರಿಗೆ ಕೊಕ್ ನೀಡಲಾಗಿದೆ. ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್.ಸಂತೋಷ್ ಅವರನ್ನು ಮುಂದುವರೆಸಲಾಗಿದೆ. ತೆಲಂಗಾಣದ ಸಂಜಯ್…
ಕಿನ್ನಿಗೋಳಿ: ಕೃತಿ ಬಿಡುಗಡೆ ಸಮಾರಂಭ- ಗ್ರಾಮೀಣ ಭಾಗದಲ್ಲಿ ಕನ್ನಡದ ಮನಸ್ಸು ಕ್ರಿಯಾಶೀಲ-ಡಾ. ಮೋಹನ್ ಆಳ್ವ
ಮೂಲ್ಕಿ: :ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡದ ಮತ್ತು ಸಾಹಿತ್ಯದ ಕೆಲಸಗಳು ನಡೆಯುತ್ತಲೇ ಇರುತ್ತವೆ. ಆ ಮೂಲಕ ಕನ್ನಡದ ಮನಸ್ಸು ಕ್ರಿಯಾಶೀಲವಾಗಿತ್ತದೆ ಎಂದು ಮೂಡುಬಿದ್ರೆ ಡಾ. ಮೋಹನ ಆಳ್ವ ಹೇಳಿದರು. ಅವರು ಶುಕ್ರವಾರ ಕಿನ್ನಿಗೋಳಿ ಅನಂತ ಪ್ರಕಾಶದ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ 169ನೇ ಕೃತಿ…
