ಡಿಕೆ ಶಿವಕುಮಾರ್​ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಾಗ ಹೆಲಿಪ್ಯಾಡ್​​​ನಲ್ಲಿ ಬೆಂಕಿ; ತಪ್ಪಿದ ದುರಂತ

ಹೊನ್ನಾವರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿಯಾದ ಘಟನೆ ಇನ್ನೂ ಹಸಿಯಾಗಿರುವಾಗಲೇ ಅವರು ಬಂದಿಳಿದ ಹೆಲಿಪ್ಯಾಡ್​​​ ಬಳಿ ಬೆಂಕಿ ಕಾಣಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್​ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಮೈಸೂರಿನಿಂದ ಹೊನ್ನಾವರಕ್ಕೆ…

ಕಾರ್ಯಕರ್ತರಿಗೆ ನೀಡಿದ ಕಿರುಕುಳ, ದಬ್ಬಾಳಿಕೆ, ಸುಳ್ಳುಕೇಸುಗಳು ಜನಾಕ್ರೋಶವಾಗಿ ತಿರುಗಿನಿಂತಿದೆ : ಯೋಗೀಶ್ ಇನ್ನಾ

ಕಾರ್ಕಳ : ಸಾಮಾನ್ಯ ಕಾರ್ಯಕರ್ತರಿಗೆ ನೀವು ನೀಡಿದ ಕಿರುಕುಳ, ದಬ್ಬಾಳಿಕೆ, ಸುಳ್ಳು ಕೇಸುಗಳು ಇವುಗಳೇ ನಿಮಗೆ ಈಗ ಜನಾಕ್ರೋಶವಾಗಿ ತಿರುಗಿನಿಂತಿದೆ. ಗಾಂಧಿ ತತ್ವವನ್ನು ಪಾಲನೆ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿಯನ್ನು ಅವಹೇಳನ ಮಾಡುವ ಬಿಜೆಪಿ ಪಕ್ಷದಿಂದ ಸಜ್ಜನಿಕೆಯ ಪಾಠದ ಅಗತ್ಯವಿಲ್ಲ ಎಂದು…

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರದಲ್ಲಿ ಸೇನಾ ಹೆಲಿಕಾಪ್ಟರ್​ ಪತನಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರದಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್​ ಪತನಗೊಂಡಿದ್ದು, ಸೇನೆಯ ಮೂರು ಅಧಿಕಾರಿಗಳು ಇದ್ದರು ಎಂದು ಹೇಳಲಾಗುತ್ತಿದೆ. ರಕ್ಷಣಾ ಕಾರ್ಯಕ್ಕಾಗಿ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಅವರನ್ನು…

ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ : 8 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಇಂಟರ್​ನೆಟ್ ಸ್ಥಗಿತ

ನವದೆಹಲಿ : ಮಣಿಪುರದಲ್ಲಿ ಎಸ್​ಟಿ ಮೀಸಲಾತಿ ವಿಚಾರವಾಗಿ ಹಿಂಸಾಚಾರ ಭುಗಿಲೆದಿದ್ದು, ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಇಂಟರ್​ನೆಟ್ ಸ್ಥಗಿತಗೊಳಿಸಲಾಗಿದೆ. ಎಸ್​ಟಿ ಮೀಸಲಾತಿ ವಿಚಾರವಾಗಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ ಬೆನ್ನಲ್ಲೆ ಸೇನೆಯು ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.. ಕಾನೂನು ಮತ್ತು ಸುವ್ಯವಸ್ಥೆ…

ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣ: ಕಟ್ಟಡ ಕಾಮಗಾರಿ, ವೆಹಿಕಲ್ ವಾಶ್ ನಿಷೇಧ

ಮಂಗಳೂರು: ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನಿರಂತರವಾಗಿ ನೀರು ಕಡಿಮೆಯಾಗುತ್ತಿದ್ದು ಈ ಸಂಬಂಧ ಜಿಲ್ಲಾಡಳಿತ ಸಭೆ ನಡೆಸಿ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದೆ. ನೇತ್ರಾವತಿ ನದಿಯ ನೀರಿನ ಒಳಹರಿವು ಈಗಾಗಲೇ ನಿಂತಿರುವುದರಿಂದ ಮತ್ತು ಬೇಸಿಗೆ ಬಿರು…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:04.05.2023,ಗುರುವಾರ, ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮೇಷ‌ಮಾಸ, ಶುಕ್ಲಪಕ್ಷ, ನಕ್ಷತ್ರ:ಚಿತ್ರಾ,ರಾಹುಕಾಲ -02:02 ರಿಂದ 03:37 ಗುಳಿಕಕಾಲ-09:19 ರಿಂದ10:53 ಸೂರ್ಯೋದಯ (ಉಡುಪಿ) 06:10 ಸೂರ್ಯಾಸ್ತ – 06:44 ದಿನವಿಶೇಷ: ಕುಕ್ಕೆ ಸುಬ್ರಹ್ಮಣ್ಯ ನೃಸಿಂಹ ಜಯಂತಿ ಉತ್ಸವ ರಾಶಿ ಭವಿಷ್ಯ:…

ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಮತದಾರರಿಗೆ ಹಣ ಹಂಚುವ ಆರೋಪ: ಚುನಾವಣಾಧಿಕಾರಿಗೆ ಪ್ರಮೋದ್ ಮುತಾಲಿಕ್ ದೂರು

ಕಾರ್ಕಳ: ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಾಗೂ ಅವರೊಂದಿಗಿರುವ ಕೆಲವೊಂದು ವ್ಯಕ್ತಿಗಳು ಮತದಾರರಿಗೆ ಬಾಡೂಟ ಹಾಗೂ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಬುಧವಾರ ಕಾರ್ಕಳ ಚುನಾವಣಾಧಿಕಾರಿ ಮದನ್ ಮೋಹನ್ ಅವರಿಗೆ ದೂರು…

ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಪವರ್ ಟಿವಿ ಮುಖ್ಯಸ್ಥರಿಂದ ತೇಜೋವಧೆ ಆರೋಪ: ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮಕ್ಕೆ ಬಿಜೆಪಿ ಆಗ್ರಹ

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಕುಮ್ಮಕ್ಕಿನಿಂದ ಅವರ ಕಾರ್ಯಕರ್ತರು ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ ಕಾರ್ಕಳ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.…

ಹನುಮ ದೇವರು,ಭಜರಂಗದಳ ರಾಜಕೀಯ ಸಂಘಟನೆ: ಬಿಜೆಪಿ ದೇವರ ಹೆಸರಿನಲ್ಲಿ ಸಮಾಜದ ದಾರಿತಪ್ಪಿಸುತ್ತಿದೆ: ಡಿಕೆ ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವ ಮಾತಾಡಿದರೆ ಬಿಜೆಪಿ ನಾಯಕರಿಗೆ ಯಾಕೆ ಗಾಬರಿ? ಬಜರಂಗ ದಳ ಮತ್ತು ಹನುಮನ ನಡುವೆ ಎಲ್ಲಿಯ ಸಂಬಂಧ? ಅದೊಂದು ಸಂಘಟನೆಯಾದರೆ ಹನುಮ ರಾಮನ ಪರಮ ಭಕ್ತ ಮತ್ತು ನಾವೆಲ್ಲ ಆರಾಧಿಸುವ ದೇವರು. ಭಜರಂಗದಳ ರಾಜಕೀಯ…

ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರಿಂದ ಸಭ್ಯತೆ ಮೀರುವ ಯತ್ನ ಖಂಡನೀಯ:ವಿ ಸುನಿಲ್ ಕುಮಾರ್

ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುತ್ತಿರುವ ಬೆಂಬಲಿಗರು ಸಾರ್ವಜನಿಕ ಸಭೆ, ವೇದಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡುವುದು, ಕೀಳು ಮಟ್ಟದ ಪದ ಪ್ರಯೋಗಿಸುತ್ತಿರುವುದನ್ನು ಮಾಡುತ್ತಿದ್ದಾರೆ. ಈ ಎಲ್ಲಾ ನಡವಳಿಕೆಗಳು ಅನಾಗರಿಕ ಸಂಸ್ಕೃತಿಯಾಗಿದೆ. ಇಂತಹ ಸಭ್ಯತೆ ಮೀರಿದ…