ಚುನಾವಣಾ ಕಾರ್ಯಗಳನ್ನು ಪಾರದರ್ಶಕತೆಯಿಂದ ನಿರ್ವಹಿಸಿ : ಪ್ರಾದೇಶಿಕ ಆಯುಕ್ತ ಪ್ರಕಾಶ್
ಉಡುಪಿ : ಚುನಾವಣಾ ಕಾರ್ಯಗಳನ್ನು ನಿರ್ವಹಿಸುವಾಗ ಪಾರದರ್ಶಕತೆಯನ್ನು ಕಾಪಾಡುವುದರಿಂದ ಅನಾವಶ್ಯಕ ದೂರುಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಪ್ರಾದೇಶಿಕ ಆಯುಕ್ತ ಪ್ರಕಾಶ್ ಹೇಳಿದರು. ಅವರು ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಚುನಾವಣಾ ಪೂರ್ವ ತಯಾರಿ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ…
ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್ ಸಮಾಧಿಗೆ ʼತ್ರಿವರ್ಣ ಧ್ವಜʼ ಹಾಕಿದ ಕಾಂಗ್ರೆಸ್ ನಾಯಕ ಬಂಧನ
ಲಕ್ನೋ: ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್ ಸಮಾಧಿ ಮೇಲೆ ತ್ರಿವರ್ಣ ಧ್ವಜ ಹಾಕಿದ ವಿವಾದವನ್ನು ಹುಟ್ಟುಹಾಕಿದ ಕಾಂಗ್ರೆಸ್‌ನ ನಾಯಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಏಪ್ರಿಲ್ 15 ರಂದು ಅತಿಕ್ ಮತ್ತು ಆತನ ಕಿರಿಯ ಸಹೋದರ ಅಶ್ರಫ್ ರಾತ್ರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಮೂವರು…
ಕನ್ನಡದಲ್ಲೇ ಓದಬಹುದು ಕೋರ್ಟ್ ತೀರ್ಪು : ಕನ್ನಡ ಭಾಷೆ ತೀರ್ಪುಗಳ ವೆಬ್ ಸೈಟ್ ಆರಂಭಿಸಿದ ಹೈಕೋರ್ಟ್
ಬೆಂಗಳೂರು: ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಕನ್ನಡ ಭಾಷೆಯಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪುಗಳು ಸಿಗಬೇಕೆಂಬ ಬಹುದಿನಗಳ ಬೇಡಿಕೆಯನ್ನು ಹೈಕೋರ್ಟ್ ಕೊನೆಗೂ ಈಡೇರಿಸಿದೆ. ಅದರಂತೆ ಕರ್ನಾಟಕ ಹೈಕೋರ್ಟ್ ಕನ್ನಡಕ್ಕೆ ಅನುವಾದಿಸಿದ ತೀರ್ಪುಗಳ ವೆಬ್ ಸೈಟ್ ಅನ್ನು ಪ್ರಾರಂಭಿಸಿದೆ. ಏಪ್ರಿಲ್ 18 ರಂದು ಮುಖ್ಯ ನ್ಯಾಯಮೂರ್ತಿ…
ಮಾನಹಾನಿ ಪ್ರಕರಣ: ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾ
ಸೂರತ್: 2019 ರ ಎಪ್ರಿಲ್ ನಲ್ಲಿ ನಡೆದ ರಾಜಕೀಯ ಪ್ರಚಾರದ ಸಂದರ್ಭದಲ್ಲಿ “ಎಲ್ಲಾ ಕಳ್ಳರು ಮೋದಿ ಉಪನಾಮವನ್ನು ಏಕೆ ಹಂಚಿಕೊಳ್ಳುತ್ತಾರೆ” ಎಂಬ ಹೇಳಿಕೆಗಾಗಿ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ತಡೆಯಾಜ್ಞೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯ ಇಂದು…
ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ಸಿಬಿಐ
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಡಿಕೆ ಶಿವಕುಮಾರ್ 2013ರಿಂದ 2018ರ ವರೆಗೆ ಅಕ್ರಮ ಆಸ್ತಿಗಳಿಕೆ ಸಂಬಂಧ ಸಿಬಿಐ ಪ್ರಕರಣ…
ಮುಂದಿನ 2 ದಿನ ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
ಬೆಂಗಳೂರು: ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು, ತುಮಕೂರು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮುಂದಿನ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ…
ಕಾರ್ಕಳ ಮಾರಿಯಮ್ಮ ದೇವಸ್ಥಾನವನ್ನು ಸುನಿಲ್ ಕುಮಾರ್ ತನ್ನ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ: ಯೋಗೀಶ್ ಇನ್ನಾ
ಕಾರ್ಕಳ: ಸಾವಿರಾರು ವರ್ಷಗಳ ಅತ್ಯಂತ ಪುರಾತನ ಹಾಗೂ ಕಾರಣೀಕ ಕ್ಷೇತ್ರವಾಗಿರುವ ಕಾರ್ಕಳದ ಕೋಟೆ ಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರವನ್ನು ಸಚಿವ ಸುನೀಲ್ ಕುಮಾರ್ ತಾನೇ ಮಾಡಿರುವುದು ಎನ್ನುವ ರೀತಿಯಲ್ಲಿ ಕೀಳುಮಟ್ಟದ ಪ್ರಚಾರವನ್ನು ಸುನಿಲ್ ಕುಮಾರ್ ಹಾಗೂ ಕಾರ್ಕಳ ಬಿಜೆಪಿಯವರು ಮಾಡಿಕೊಂಡು ಬರುತ್ತಿರುವುದು ಕಾರ್ಕಳ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:20.04.2023, ಗುರುವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ,ವಸಂತ ಋತು, ಮೇಷ:ಮಾಸ,ಕೃಷ್ಣಪಕ್ಷ ನಕ್ಷತ್ರ:ಅಶ್ವಿನಿ,ರಾಹುಕಾಲ -02:03 ರಿಂದ 03:37 ಗುಳಿಕಕಾಲ-09:23 ರಿಂದ 10:57 ಸೂರ್ಯೋದಯ (ಉಡುಪಿ) 06:16 ಸೂರ್ಯಾಸ್ತ – 06:42 ದಿನವಿಶೇಷ: ಅಮವಾಸ್ಯೆ ರಾಶಿ ಭವಿಷ್ಯ: ಮೇಷ(Aries): ಯಾವುದೇ ಹೊಸ ಕೆಲಸವನ್ನು…
ಕಾರ್ಕಳ: ನ್ಯಾಯವಾದಿ ಸಂಪತ್ ಕುಮಾರ್ ಹೃದಯಾಘಾತದಿಂದ ವಿಧಿವಶ
ಕಾರ್ಕಳ: ಕಾರ್ಕಳ ಬಾರ್ ಅಸೋಸಿಯೇಷನ್ ಮಾಜಿ ಕೋಶಾಧಿಕಾರಿಯಾಗಿದ್ದ ನ್ಯಾಯವಾದಿ ಸಂಪತ್ ಕುಮಾರ್ (53) ಬುಧವಾರ (ಏಪ್ರಿಲ್19)ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಕಳ ಬೈಪಾಸ್ ಬಳಿಯ ಅಪಾರ್ಟ್ ಮೆಂಟ್ ನಿವಾಸಿಯಾಗಿದ್ದ ಸಂಪತ್ ಕುಮಾರ್ ಕಾರ್ಕಳ ತಾಲೂಕು ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಸಮಾಜಮುಖಿ…
ಕೇಸರಿಮಯವಾದ ಕಾರ್ಕಳ ನಗರ! ಸುನಿಲ್ ಕುಮಾರ್ ನಾಮಪತ್ರಕ್ಕೆ ಹರಿದು ಬಂತು ಜನಸಾಗರ: ಕಾರ್ಕಳದ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಸರ್ಕಾರದ ಫಲಾನುಭವಿ: ಬಿಜೆಪಿ ಗೆದ್ದರೆ ವಿಕಾಸ ಕಾಂಗ್ರೆಸ್ ಗೆದ್ದರೆ ವಿನಾಶ: ಸುನಿಲ್ ಕುಮಾರ್
ಕಾರ್ಕಳ: ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಕಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿಕಾಸವಾಗುತ್ತದೆ ಕಾಂಗ್ರೆಸ್ ಬಂದರೆ ವಿನಾಶಕಾರಿಯಾಗಿ ಪರಿಣಮಿಸುತ್ತದೆ ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ಬುಧವಾರ ನಾಮಪತ್ರ ಸಲ್ಲಿಸಿ ಬಳಿಕ ಕುಕ್ಕುಂದೂರು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ…
