ಕಂಬಳಕ್ಕೆ ಕಂಟಕ! :ಕಂಬಳ ಕ್ರೀಡೆಯಲ್ಲಿ ಕೋಣಗಳಿಗೆ ಹಿಂಸೆ : ಪಶುಸಂಗೋಪನಾ ಇಲಾಖೆಯಿಂದ ನೋಟೀಸ್ ಜಾರಿ
ಮಂಗಳೂರು: ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಕಂಬಳ ಕ್ರೀಡೆ ಆಯೋಜನೆಯಾಗುತ್ತಿದೆ. ಹೀಗೆ ಪ್ರತಿಯೊಂದು ಕಡೆಯು ನಡೆಯುತ್ತಿರುವ ಕಂಬಳದ ಮೇಲೆ ಪ್ರಾಣಿದಯಾ ಸಂಘ ಪೇಟಾ ಕಣ್ಣಿಟ್ಟಿದ್ದು, ಇದೀಗ ಮತ್ತೆ ಕಂಬಳದಲ್ಲಿ ಹಿಂಸಾಚಾರ ನಡೆಯುತ್ತಿರುವ ಬಗ್ಗೆ ದೂರು ನೀಡಿ, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ…
ಕುಂದಾಪುರ : ಬಸ್ ನಿಂದ ಬಿದ್ದು ಚಕ್ರದಡಿ ಸಿಲುಕಿ ವಿದ್ಯಾರ್ಥಿ ದಾರುಣ ಸಾವು
ಕುಂದಾಪುರ : ಖಾಸಗಿ ಬಸ್ ನಿಂದ ಇಳಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದ ವಿದ್ಯಾರ್ಥಿಯ ಮೇಲೆ ಬಸ್ ಚಲಿಸಿದ ಪರಿಣಾಮ ವಿದ್ಯಾರ್ಥಿ ಬಸ್ಸಿನ ಚಕ್ರಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಹೆಮ್ಮಾಡಿ…
ಪಾಕಿಸ್ತಾನ ಜಿಂದಾಬಾದ್ ಎಂದು ಪೋಸ್ಟ್ ಮಾಡಿದವನ ವಿರುದ್ದದ ಕ್ರಿಮಿನಲ್ ಕೇಸ್ ರದ್ದು ಮಾಡಿದ ಹೈಕೋರ್ಟ್
ಬೆಂಗಳೂರು : ಪಾಕಿಸ್ತಾನ ಜಿಂದಾಬಾದ್ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಪ್ರಕರಣದ ದಾಖಲಾತಿಯಲ್ಲಿ ಕಾರ್ಯವಿಧಾನದ ಅಕ್ರಮಗಳು ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಈ ಆದೇಶ ಹೊರಡಿಸಿದ್ದಾರೆ. “ಹರ್…
ಅಜೆಕಾರು : ಕುಸಿದು ಬಿದ್ದು ವ್ಯಕ್ತಿ ಸಾವು
ಅಜೆಕಾರು : ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಬೊಂಡುಕುಮೇರಿ ಎಂಬಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಬೊಂಡುಕುಮೇರಿಯ ಲಿಗೋರಿ.ಪಿ ಡಿಸೋಜ (65ವ) ಮೃತಪಟ್ಟವರು. ಅವರು ಬೆಳಿಗ್ಗೆ ಮನೆಯಲ್ಲಿ ತಿಂಡಿ ಮುಗಿಸಿ ಕೆಲಸಕ್ಕೆ ಹೋಗಿದ್ದವರು ಮಧ್ಯಾಹ್ನದ ವೇಳೆ ತಲೆ…
ರಾಜಸ್ಥಾನದ ಭರತ್‌ಪುರದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಇಬ್ಬರು ಸಜೀವ ದಹನ
ರಾಜಸ್ಥಾನ: ರಾಜಸ್ಥಾನದ ಭರತ್‌ಪುರದಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಅದರಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ. ಭರತ್‌ಪುರ ಜಿಲ್ಲೆಯ ಉಚೈನ್ ಪಿಂಗೋರಾದಲ್ಲಿ ಇಂದು ಬೆಳಗ್ಗೆ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್ ಪತನಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಮಾಹಿತಿ ತಿಳಿದ ಜಿಲ್ಲಾಡಳಿತ ಸ್ಥಳಕ್ಕೆ ಆಗಮಿಸಿದೆ…
ಪ್ರವೀಣ್ ನೆಟ್ಟಾರು ಹಂತಕರು ಸೌದಿಯಲ್ಲಿ ಪತ್ತೆ
ದಕ್ಷಿಣಕನ್ನಡ : ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಹಂತಕರು ಸೌದಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಎನ್‌ಐಎ ಚಾರ್ಜ್ಶೀಟ್ ವರದಿಯಲ್ಲಿ ಬಹಿರಂಗವಾಗಿದೆ. ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನನ್ನು ಜುಲೈ 26 ರಂದು…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:28.01.2023, ಶನಿವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಶುಕ್ಲಪಕ್ಷ, ನಕ್ಷತ್ರ:ಅಶ್ವಿನಿ, ರಾಹುಕಾಲ – 09:52 ರಿಂದ 11:18 ಗುಳಿಕಕಾಲ 06:59 ರಿಂದ 08:26 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:28 ರಾಶಿ ಭವಿಷ್ಯ: ಮೇಷ(Aries):…
ಕಾರ್ಕಳದ ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿ ಪರಶುರಾಮ ಪ್ರತಿಮೆ ಲೋಕಾರ್ಪಣೆ:ಪರಶುರಾಮನ ಪ್ರತಿಮೆ ನಿರ್ಮಾಣದ ಮೂಲಕ ಪುರಾಣಕ್ಕೆ ಹೊಸತೊಂದು ಕುರುಹು ಸಿಕ್ಕಂತಾಗಿದೆ- ಸಿಎಂ ಬೊಮ್ಮಾಯಿ
ಕಾರ್ಕಳ : ಪರಶುರಾಮನ ಪ್ರತಿಮೆ ನಿರ್ಮಾಣದ ಮೂಲಕ ಪುರಾಣಕ್ಕೆ ಹೊಸತೊಂದು ಕುರುಹು ಸಿಕ್ಕಂತಾಗಿದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾವು ಭಾಗ್ಯವಂತರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಉಮಿಕಲ್ ಬೆಟ್ಟದ ಮೇಲೆ 33 ಅಡಿ ಎತ್ತರದ…
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಲಾಂಛನ ಬಿಡುಗಡೆ
ಕಾರ್ಕಳ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಅಂಗವಾಗಿ ನೂತನ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ, ಉಡುಪಿ ಜಿಲ್ಲೆ ರಜತ ಮಹೋತ್ಸವ ಆಚರಿಸಿದ ಸಂದರ್ಭದಲ್ಲಿಯೇ ಜಿಲ್ಲೆಯ ಪತ್ರಕರ್ತರ…
ಚುನಾವಣೆಯಲ್ಲಿ ಸೋಲಿನ ಭಯದಿಂದ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಸಿ ಎಂ ಬೊಮ್ಮಾಯಿ
ಕಾರ್ಕಳ: ಮುಂದಿನ ಚುನಾವಣೆಯಲ್ಲಿ ಸೋಲಿನ ಭಯದಿಂದ ಸಿದ್ದರಾಮಯ್ಯನವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ, ಆದ್ದರಿಂದ ಪ್ರಧಾನಿ ಮೋದಿಯವರನ್ನು ಪದೇಪದೇ ರಾಜ್ಯಕ್ಕೆ ಕರೆಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯನವರ ಆರೋಪಕ್ಕೆ…
