ಕಾರ್ಕಳ : ನಾಳೆ 2ನೇ ಹಂತದ ಬಿಜೆಪಿ ಬೂತ್ ವಿಜಯ ಸಂಕಲ್ಪ ಅಭಿಯಾನ ಉದ್ಘಾಟನೆ
ಕಾರ್ಕಳ : ಬಿಜೆಪಿ ವತಿಯಿಂದ 2ನೇ ಬೂತ್ ವಿಜಯ ಸಂಕಲ್ಪ ಅಭಿಯಾನದ ಉದ್ಘಾಟನೆಯು ನಾಳೆ ಸಂಜೆ 5 ಗಂಟೆಗೆ ಇವತ್ತೂರು ಗ್ರಾಮದ ಕೊಳಕೆ ಶಾಲೆ ಬಳಿಯ ಕಾಲೋನಿಯಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ನಡೆಯಲಿದೆ…
ಮಂಗಳೂರಿನ ವೈದ್ಯಲೋಕದಲ್ಲಿ ಗಾಂಜಾ ಲೋಕ! :ಇಬ್ಬರು ವೈದ್ಯರನ್ನು ವಜಾಗೊಳಿಸಿದ ಕೆಎಂಸಿ
ಮಂಗಳೂರು: ಮಂಗಳೂರಿನಲ್ಲಿ ಗಾಂಜಾ ಪ್ರಕರಣದಲ್ಲಿ ವೈದ್ಯರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ವಜಾಗೊಳಿಸಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಅತ್ತಾವರ ಕೆಎಂಸಿ ಆಸ್ಪತ್ರೆ ಮೆಡಿಕಲ್ ಆಫೀಸರ್ ಡಾ.ಸಮೀರ್, ಮಣಿಪಾಲ ಕೆಎಂಸಿ ಆಸ್ಪತ್ರೆ ಮೆಡಿಕಲ್ ಸರ್ಜನ್ ಡಾ.ಮಣಿಮಾರನ್…
ಶಬರಿಮಲೆ ಕಾಣಿಕೆ ಎಣಿಕೆಯಲ್ಲಿ ಲೋಪ: ವರದಿ ನೀಡುವಂತೆ ದೇವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್ ಸೂಚನೆ
ಕೊಚ್ಚಿ: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭಕ್ತರು ನೀಡಿರುವ ಕಾಣಿಕೆ ಮತ್ತು ಇತರೆ ದೇಣಿಗೆ ಪೊಟ್ಟಣ ಎಣಿಕೆಯಲ್ಲಿ ಏನಾದರೂ ಲೋಪವಾಗಿದೆಯೇ ಎಂಬುದನ್ನು ತನಿಖೆ ನಡೆಸಿ ವರದಿ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿಯ ಗುಪ್ತಚರ ವಿಭಾಗಕ್ಕೆ ಹೈಕೋರ್ಟ್ ಸೂಚಿಸಿದೆ. ಕಾಣಿಕೆಯನ್ನು ಎಣಿಸುವಲ್ಲಿ ಆದ ಲೋಪದ…
ಕೆದಿಂಜೆ:ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆ: ಅಗ್ನಿಶಾಮಕ ದಳದ ಕಾರ್ಯಾಚರಣೆ ಮೂಲಕ ಮಹಿಳೆಯ ರಕ್ಷಣೆ
ಕಾರ್ಕಳ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳ ತಂಡ ರಕ್ಷಣೆ ಮಾಡಿರುವ ಘಟನೆ ಗುರುವಾರ ರಾತ್ರಿ ಕೆದಿಂಜೆ ಎಂಬಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಕೆದಿಂಜೆಯ ಕುಂಟಲಗುಂಡಿ ನಿವಾಸಿ ಹರಿಣಾಕ್ಷಿ(39) ಎಂಬವರು ರಕ್ಷಿಸಲ್ಪಟ್ಟ ಮಹಿಳೆ. ಹರಿಣಾಕ್ಷಿ…
ಶಿಕ್ಷೆ ಪ್ರಮಾಣ ಕಡಿತಕ್ಕೆ ಪೋಕ್ಸೋ ನ್ಯಾಯಾಲಯಕ್ಕೆ ಅಧಿಕಾರವಿಲ್ಲ : ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಪೋಕ್ಸೋ ಕಾಯ್ದೆಯ ಅಡಿಯಲ್ಲಿ ನಿಗದಿಯಾಗುವಂತ ಶಿಕ್ಷೆಯ ಪ್ರಮಾಣ ಕಡಿತಕ್ಕೆ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಸಂಬಂಧ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಾಲವಾಡಿಯ ನಿವಾಸಿ ಶೇಖ್ ರೌಫ್ ಎಂಬಾತನಿಗೆ ನೀಡಲಾಗಿದ್ದಂತ…
ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:20.01.2023,ಶುಕ್ರವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಹೇಮಂತ ಋತು, ಮಾಸ: ಮಕರ, ಕೃಷ್ಣಪಕ್ಷ, ನಕ್ಷತ್ರ:ಮೂಲಾ,ರಾಹುಕಾಲ – 11:16 ರಿಂದ 12:42 ಗುಳಿಕಕಾಲ 08:25 ರಿಂದ 09:51 ಸೂರ್ಯೋದಯ (ಉಡುಪಿ) 07:04 ಸೂರ್ಯಾಸ್ತ – 06:24 ರಾಶಿ ಭವಿಷ್ಯ: ಮೇಷ(Aries): ನಿಮ್ಮ ಹೆಚ್ಚಿನ…
ಕಾರ್ಕಳ :ಮಾನಸಿಕ ಅಸ್ವಸ್ಥೆ ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳ : ಕಾರ್ಕಳ ಜರಿಗುಡ್ಡೆಯ ಸುರಕ್ಷಾ ಸೇವಾಶ್ರಮದಲ್ಲಿ ಮಾನಸಿಕ ಅಸ್ವಸ್ಥ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ಕಸಬಾ ಗ್ರಾಮದ ತೆಳ್ಳಾರು ರಾಘವೇಂದ್ರ ಮಠದ ಬಳಿಯ ನಿವಾಸಿ ಪ್ರೀತಿಕಾ (34 ವರ್ಷ) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪ್ರೀತಿಕಾ ಕಳೆದ ಏಳು…
ಮುಂಡ್ಲಿ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಅಜೆಕಾರು : ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಲಿ ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಜಾರ್ಕಳ- ಮುಂಡ್ಲಿಯ ನಾರಾಯಣ ಗುರು ಕಾಲೋನಿ ನಿವಾಸಿ ಜಯ ಪೂಜಾರಿ (48 ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಅವರು…
ಜ. 22 ರಂದು ಹಿರಿಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸತ್ಸಂಗ ಲಹರಿ
ಕಾರ್ಕಳ: ಕಾರ್ಕಳ ತಾಲೂಕಿನ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಜ.22 ಪ್ರತಿಷ್ಠಾ ಮಹೋತ್ಸವದಂದು ಸಂಜೆ 5.30ರಿಂದ ಶ್ರೀ ರವಿಶಂಕರ್ ಗುರುದೇವರ ಆಶೀರ್ವಾದದೊಂದಿಗೆ ಸ್ವಾಮಿ ಶ್ರೀ ಸೂರ್ಯ ಪಾದ ರಿಂದ ಸತ್ಸಂಗ…
ಕಾರ್ಕಳ : ಸರಕಾರಿ ಆಸ್ಪತ್ರೆಯಲ್ಲಿ 1,30,000 ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕಳವು
ಕಾರ್ಕಳ : ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯೊಬ್ಬರ ಚಿನ್ನದ ಕರಿಮಣಿ ಸರ ಕಳುವಾಗಿರುವ ಘಟನೆ ನಡೆದಿದೆ. ಶಿರ್ಲಾಲಿನ ಸಂಕೇತ್ ಎಂಬವರ ಪತ್ನಿ ಉಷಾ ಹೆರಿಗೆಗೆಂದು ಜ.15 ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 16ರಂದು ಹೆರಿಗೆಯಾದ ಬಳಿಕ ಹೆರಿಗೆ…
