ಕಾರ್ಕಳ : ಬೈಕಿಗೆ ರಿಕ್ಷಾ ಡಿಕ್ಕಿಯಾಗಿ ಸವಾರ ಮತ್ತು ಸಹಸವಾರ ಇಬ್ಬರೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಹಂಚದಕಟ್ಟೆ ಜಂಕ್ಷನ್ ಬಳಿ ಜುಲೈ.29 ರಂದು ಈ ಅಪಘಾತ ಸಂಭವಿಸಿದ್ದು, ಬಾಗಲಕೋಟೆ ಮೂಲದ ಪ್ರಕಾಶ್ ಅವರು ಪರಿಚಯದ ಕಿರಣ್ ಅವರ ಬೈಕಿನಲ್ಲಿ ಹಂಪನಕಟ್ಟೆಯಿಂದ ಪಳ್ಳಿ ಕಡೆಗೆ ಹೋಗುತ್ತಿದ್ದಾಗ ಹಂಚದಕಟ್ಟೆ ಜಂಕ್ಷನ್ ನಿಂದ ಶ್ಯಾಮಲಾ ಎಂಬವರ ಅಂಗಡಿಯ ಸ್ವಲ್ಪ ಮುಂದೆ ಎದುರಿನಿಂದ ಬಂದ ರಿಕ್ಷಾ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದು ಸವಾರ ಕಿರಣ್ ತಲೆಗೆ ಗಂಭೀರ ಗಾಯವಾಗಿ ಮಣಿಪಾಲ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದರೆ. ಸಹಸವಾರ ಪ್ರಕಾಶ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.