Share this news

ಕಾರ್ಕಳ: ಬೈಲೂರಿನ ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಥೀಮ್ ಪಾರ್ಕಿನಲ್ಲಿ ಪರಶುರಾಮನ ಪ್ರತಿಮೆಯನ್ನು ಪುನರ್ ಪ್ರತಿಷ್ಟಾಪನೆ ಮಾಡುವಲ್ಲಿ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ರಚಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಕೃಷ್ಣಮೂರ್ತಿ ಆಚಾರ್ಯ, ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಬಜಗೋಳಿ ಆಯ್ಕೆಯಾಗಿದ್ದಾರೆ.
ಸಮಿತಿಯ ಸಲಹೆಗಾರರಾಗಿ ವಿಶ್ವಾಸ್, ವಿ,ಅಮೀನ್, ಉಪಾಧ್ಯಕ್ಷರಾಗಿ ನಲ್ಲೂರು ಪ್ರದೀಪ್ ಶೆಟ್ಟಿ , ನಿತಿನ್ ಪೂಜಾರಿ ಬೆಳುವಾಯಿ , ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಕುಲಾಲ್ ಬೇಲಾಡಿ,ಜತೆ ಕಾರ್ಯದರ್ಶಿಯಾಗಿ ಸಂತೋಷ್ ಬೋಳ, ಕೋಶಾಧಿಕಾರಿಯಾಗಿ ಹವಾಲ್ದಾರ್ ಬೆಟ್ಟು ಶಶಿಧರ ಹವಾಲ್ದಾರ್’ಬೆಟ್ಟು ಹಾಗೂ ಸಮಿತಿಯ ಸದಸ್ಯರಾಗಿ ನವೀನ್ ಸಾಲಿಯಾನ್, ಚೇರ್ಕಾಡಿಯ ವಿಘ್ನೇಶ್ ಚೇರ್ಕಾಡಿ, ಹರೀಶ್ ಪೂಜಾರಿ ಕಡ್ತಲ, ದಿನೇಶ್ ಕುಮಾರ್ ಚಾರ ಮತ್ತು ರಾಜೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸಮಿತಿ ರಚನೆಯಾದ ಬಳಿಕ ಮೊದಲ ಸಭೆಯು ಮಾ. 25 ರಂದು ಉಡುಪಿಯ ಮಥುರಾ ಹೋಟೆಲಿನಲ್ಲಿ ನಡೆಯಿತು. ಸಮಿತಿಯ ಗೌರವಾಧ್ಯಕ್ಷರಾದ ಕೆ ಕೃಷ್ಣಮೂರ್ತಿ ಆಚಾರ್ಯ ಮತ್ತು ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಯವರ ನೇತೃತ್ವತ್ವದಲ್ಲಿ ಸಭೆ ನಡೆಯಿತು.
ಪರಶುರಾಮ ಥೀಮ್ ಪಾರ್ಕ್ ಪುನರ್ ನಿರ್ಮಾಣದ ಕುರಿತು ನಡೆಸಬೇಕಾದ ಹೋರಾಟದ ರೂಪುರೇಷೆ ಕುರಿತು ಕೆ.‌ಕೃಷ್ಣಮೂರ್ತಿ ಆಚಾರ್ಯ ವಿವರಿಸಿದರು
ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿರವರು ಈ ಬಗ್ಗೆ ಯಾವ ರೀತಿಯಲ್ಲಿ ಮುಂದಿನ ದಿನಗಳು ನಿರ್ಣಾಯಕಯಕವಾಗಿದ್ದು ಸಭೆಯು ಕರಾವಳಿ ಜಿಲ್ಲೆಯ ಪ್ರತೀ ತಾಲೂಕು ಹಾಗೂ ಗ್ರಾಮಮಟ್ಟದಿಂದ ಹಿಂದೂ ಧರ್ಮ ಹಾಗೂ ಹಿಂದೂಗಳ ದೇವರು ಹಾಗೂ ವಿಷ್ಣುವಿನ ದಶಾವತಾರಗಳಲ್ಲೊಂದಾದ ಪರಶುರಾಮ ದೇವರ ಕುರಿತು ನೆಡೆಯಬೇಕಾದ ಜಾಗೃತಿ ಹಾಗೂ ಸನಾತನ ಧರ್ಮದ ರಕ್ಷಣೆ ಹಾಗೂ ಅಗತ್ಯತೆ ಬಗ್ಗೆ ತಿಳಿಸಿದರು. ಸಭೆಯಲ್ಲಿ ಸಮಿತಿಯ ಸದಸ್ಯರು ಸೂಕ್ತ ರೀತಿಯಲ್ಲಿ ಅಧಿಕಾರಿಗಳ ಜೊತೆ, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರಕಾರದ ಮಟ್ಟದಲ್ಲಿ ಪರಶುರಾಮ ಮೂರ್ತಿಯನ್ನು ಪುನರ್ ಸ್ಥಾಪಿಸಲು ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚಿಸಿದರು

 

 

 

Leave a Reply

Your email address will not be published. Required fields are marked *