Share this news

 

 

 

 

ಕಾರ್ಕಳ, ಡಿ.30: ವೈದ್ಯರ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ಸಂದರ್ಭದಲ್ಲೇ ರೋಗಿಯು ಮೃತಪಟ್ಟ ಪ್ರಕರಣ ಕುರಿತು ಕಾರ್ಕಳ ಸ್ಪಂದನಾ ಆಸ್ಪತ್ರೆಯ ಮೂವರು ವೈದ್ಯಾಧಿಕಾರಿಗಳ ಕರ್ತವ್ಯಲೋಪ ಸಾಬೀತಾಗಿದ್ದು, ಆಸ್ಪತ್ರೆಯ ವೈದ್ಯರಾದ  ಡಾ.ನಾಗರತ್ನ ಹಾಗೂ ಡಾ. ರಹಮತುಲ್ಲಾ, ಡಾ .ತುಷಾರ್ ವಿರುದ್ಧ ಕೇಸ್ ದಾಖಲಾಗಿದೆ.

ಪ್ರಕರಣದ ಹಿನ್ನಲೆ:
ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಝಬೇದಾ(52) ಎಂಬವರು ಕಳೆದ 2025ರ ಮೇ 10ರಂದು ವಿಪರೀತ ಹೊಟ್ಟೆ ನೋವು ಕಾರಣದಿಂದ ಚಿಕಿತ್ಸೆಗೆಂದು ವೈದ್ಯರಾದ ಡಾ.ಕೆ.ಎಸ್ ರಾವ್ ಒಡೆತನದ ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ದಾಖಲಾಗಿದ್ದರು. ಅವವ ಆರೋಗ್ಯದಲ್ಲಿ ತೀವೃ ಏರುಪೇರಾದ ಹಿನ್ನಲೆಯಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿ ಡ್ರಿಪ್ಸ್ ಹಾಕಿದ್ದರು. ತದನಂತರ ಮಧ್ಯಾಹ್ನದವರೆಗೂ ರೋಗಿ ಝಬೇದಾ ಅವರ ಆರೋಗ್ಯದ ಸ್ಥಿತಿ ನೋಡದೇ ಬಳಿಕ ಮಧ್ಯಾಹ್ನ 1.30ರ ಸುಮಾರಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗರತ್ನ ಝುಬೇದಾ ಅವರನ್ನು ಪರೀಕ್ಷಿಸಿ ಕೂಡಲೇ ಆಪರೇಷನ್ ಆಗಬೇಕು ಇಲ್ಲವಾದರೆ ಜೀವಕ್ಕೆ ಅಪಾಯವಿದೆ ಎಂದು ಹೇಳಿ ತಕ್ಷಣವೇ ಆಪರೇಷನ್ ಥೀಯೇಟರಿಗೆ ಕರೆದೊಯ್ದಿದ್ದರು. ಬಳಿಕ ವೈದ್ಯರಾದ ಡಾ.ಕೆ.ಎಸ್ ರಾವ್, ಡಾ.ನಾಗರತ್ನ ಹಾಗೂ ಡಾ. ರಹಮತುಲ್ಲಾ ಆಪರೇಷನ್ ಥಿಯೇಟರ್ ಒಳಗೆ ಹೋಗಿದ್ದರು. ಇದಾದ ಬಳಿಕ ಸಂಜೆ 4 ಗಂಟೆಗೆ ವೈದ್ಯರಾದ ಡಾ.ರಹಮತ್ತುಲ್ಲಾ ಅವರು ಹೊರಗೆ ಬಂದು ಝಬೇದಾಯವರ ಮಗಳಾದ ಮುಬೀನಾರ ಬಳಿ ಬಂದು ನಿಮ್ಮ ತಾಯಿಯ ಆರೋಗ್ಯ ತುಂಬಾ ಹದಗೆಟ್ಟಿದೆ ತಕ್ಷಣವೇ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು. ಬಳಿಕ ಸ್ವಲ್ಪಹೊತ್ತಿನಲ್ಲಿ ಮತ್ತೆ ಹೊರಬಂದ ವೈದ್ಯರು ನಿಮ್ಮ ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಮೃತ ಝಬೇದಾ ಸಂಬAಧಿಕರು ಅವರ ಸಾವಿಗೆ ವೈದ್ಯರ    ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಅಂದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಕೂಡಲೇ ಈ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಸರ್ಜನ್ ಅವರಿಗೆ ಸೂಚಿಸಿದ್ದರು. ಈ ಕುರಿತು ಸಮಗ್ರ ತನಿಖೆ ನಡೆಸಿದ ಜಿಲ್ಲಾ ಸರ್ಜನ್ ಡಾ.ಎಚ್. ಅಶೋಕ್ ವರದಿ ನೀಡಿದ್ದು, ಝಬೇದಾ ಅವರು ಆಪರೇಷನ್ ಮಾಡುತ್ತಿರುವಾಗಲೇ ಮೃತಪಟ್ಟಿದ್ದು, ಇದಕ್ಕೆ ವೈದ್ಯಾಧಿಕಾರಿಗಳ  ನಿರ್ಲಕ್ಷವೇ ಕಾರಣವೆಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ವರದಿಯನ್ನು ಆಧರಿಸಿ ಆಸ್ಪತ್ರೆಯ ಮೂವರು ವೈದ್ಯರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

    

   

             

     

             

           
   

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

 

Leave a Reply

Your email address will not be published. Required fields are marked *