ಕಾರ್ಕಳ:ಕಾರಿನಲ್ಲಿ ಮಾರಕಾಸ್ತ್ರಗಳ ಜತೆ ದರೋಡೆಗೆ ಹೊಂಚು ಹಾಕುತ್ತಿದ್ದ 5 ಮಂದಿ ಖದೀಮರನ್ನು ಕಾರ್ಕಳ ನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಲು ಮುಂದಾದಾಗ ಆರೋಪಿಗಳು ಪರಾರಿಯಾದ ಘಟನೆ ಮೇ 25ರಂದು ಶನಿವಾರ ನಡೆದಿದೆ.
ಕಾರ್ಕಳ ತಾಲೂಕು ಕೌಡೂರು ಗ್ರಾಮದ ಕಂಪಾನು ಎಂಬಲ್ಲಿ ಕಾರಿನಲ್ಲಿ ಕುಳಿತು ದರೋಡೆಗೆ ಪ್ಲಾನ್ ರೂಪಿಸುತ್ತಿದ್ದ ಇಸಾಕ್, ಕಬೀರ್, ಇಬ್ರಾಹಿಂ, ಮಹಮ್ಮದ್ ಶಿಯಾಬ್, ಬಂಗ್ಲೆಗುಡ್ಡೆಯ ಫೈಜಲ್ ಎಂಬವರನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಲು ಯತ್ನಿಸಿದಾಗ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರು ಕಾರು ಹಾಗೂ ಡ್ರ್ಯಾಗರನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ