ಕಾರ್ಕಳ: ಕಾರ್ಕಳದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮಿತಿಮೀರಿದ್ದು ಪರವಾನಗಿ ಇಲ್ಲದೇ ಜಾರ್ಕಳದ ಸರ್ಕಾರಿ ಜಾಗದ ಸರ್ವೇ ನಂಬ್ರ 181/1 ರಲ್ಲಿರುವ ಕಲ್ಲುಕೋರೆ ಪಾದೆಯಲ್ಲಿ ಆರೋಪಿ ಸುರೇಂದ್ರ ಎಂಬಾತ ಅಕ್ರಮ ಗಣಿಕಾರಿಕೆ ನಡೆಸುತ್ತಿರುವ ಮಾಹಿತಿ ಪಡೆದ ಕಾರ್ಕಳ ನಗರ ಠಾಣೆ ಪೊಲೀಸರು ಶನಿವಾರ ಕಲ್ಲು ಕೋರೆಗೆ ದಾಳಿ ನಡೆಸಿದ್ದಾರೆ.ಈ ವೇಳೆ
ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಪರಾರಿಯಾಗಿದ್ದು, ಕಲ್ಲು ಗಣಿಗಾರಿಕೆಗೆ ಬಳಸುತ್ತಿದ್ದ ಟಿಪ್ಪರ್ ಲಾರಿ ಮತ್ತು ಜೆಸಿಬಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.