ಕಾರ್ಕಳ: ಕಳೆದ ಎರಡು ದಶಕಗಳಿಂದ ನಕ್ಸಲ್ ಬಾಧಿತ ಪ್ರದೇಶವಾಗಿರುವ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ಈದು ಗ್ರಾಮದ ಅತೀ ಗ್ರಾಮೀಣ ಪ್ರದೇಶವಾದ ಮುಳಿಕಾರು ಶಾಲೆಯಲ್ಲಿ ಈ ಸಾಲಿನ ಹೊಸ್ಮಾರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಶಿಕ್ಷಣ ಇಲಾಖೆ ಆಯೋಜಿಸಿದೆ.
ಶಾಲಾ ಶಿಕ್ಷಣ ಇಲಾಖೆ ನಡೆಸುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಯು ನ.5 ರಂದು ಮಂಗಳವಾರ ಮುಳಿಕಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದು, ಹೊಸ್ಮಾರು ಕ್ಲಸ್ಟರ್ ವ್ಯಾಪ್ತಿಯ ಕಿರಿಯ ವಿಭಾಗದ 12, ಹಿರಿಯ ವಿಭಾಗದ 08, ಹಾಗೂ ಪ್ರೌಢ ವಿಭಾಗದ 04, ಶಾಲೆಗಳ ಸುಮಾರು 326 ವಿದ್ಯಾರ್ಥಿಗಳು 42 ಬಗೆಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಈ ಕಾರ್ಯಕ್ರಮದ ಯಶಸ್ಸಿನ ಊರಿಗೆ ವಿಧ್ಯಾಭಿಮಾನಿಗಳು ಕೈ ಜೋಡಿಸಿದ್ದು ಪೂರ್ವಾಹ್ನದ ಉದ್ಘಾಟನಾ ಕಾರ್ಯಕ್ರಮ, ಅಪರಾಹ್ನದ ಸಮಾರೋಪ ಸಮಾರಂಭದಲ್ಲಿ ಜನಪ್ರತಿನಿಧಿಗಳು ಅಧಿಕಾರಿ ವರ್ಗದವರು ದಾನಿಗಳು, ಭಾಗವಹಿಸಲಿದ್ದಾರೆ ಎಂದು ಹೊಸ್ಮಾರು ಕ್ಲಸ್ಟರ್ ನ ಸಿ.ಆರ್.ಪಿ. ಕೃಷ್ಣಕುಮಾರ್ ಎನ್. ಇ ತಿಳಿಸಿದ್ದಾರೆ.