ಬೆಂಗಳೂರು: ಬೆಲೆ ಏರಿಕೆಯಿಂದ ಹೈರಾಣಾದ ರಾಜ್ಯದ ಜನತೆ ಇದೀಗ ಮತ್ತೆ ಡಿಸೇಲ್ ಬೆಲೆ ಏರಿಕೆಯಿಂದ ಶಾಕ್ ಆಗಿದ್ದು, ಡೀಸೆಲ್ ದರವನ್ನು 2 ರೂಗೆ ಹೆಚ್ಚಳ ಮಾಡಿ ಆದೇಶಿಸಿದೆ.
ರಾಜ್ಯ ಸರ್ಕಾರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಡೀಸೆಲ್ ಮೇಲಿನ ಮಾರಾಟ ತೆರಿಗೆ ದರ ಶೇ.21.17ರಷ್ಟು ಏರಿಕೆ ಮಾಡಿದೆ. ಹೀಗಾಗಿ ಡೀಸೆಲ್ ದರ ಪ್ರತಿ ಲೀಟರ್ ಗೆ ರೂ.2ರಷ್ಟು ಹೆಚ್ಚಳ ಆದಂತೆ ಆಗಲಿದೆ.
ಈ ಕುರಿತು ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಮಾರಾಟ ತೆರಿಗೆ ದರವನ್ನು ಶೇ 21.17 ಕ್ಕೆ ಏರಿಸಿ ಆದೇಶ ಹೊರಡಿಸಲಾಗಿದೆ.