ಕಾರ್ಕಳ: ಭಾರತೀಯ ಜನತಾ 75ನೇ ಜನುಮದಿನದ ಆಚರಣೆಯ ಸೇವಾ ಪಾಕ್ಷಿಕದ ಸಲುವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಪಾರ್ಟಿ ಕಾರ್ಕಳ ಮಂಡಲ ಯುವಮೋರ್ಚಾ ಕಾರ್ಕಳ ಹಾಗೂ ರಕ್ತನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಉಡುಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಜೀಯವರ 75ನೇ ಜನುಮದಿನದ ಆಚರಣೆಯ ಸೇವಾ ಪಾಕ್ಷಿಕದ ಸಲುವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಶಾಸಕರ ಕಛೇರಿ ವಿಕಾಸದಲ್ಲಿ ನಡೆಯಿತು.
ಬಿಜೆಪಿ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು.
ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿಯ ವೈದ್ಯಾಧಿಕಾರಿಗಳಾದ ಡಾ. ವೀಣಾಕುಮಾರಿ ಮಾತನಾಡಿ, ರಕ್ತದಾನ ಶ್ರೇಷ್ಠದಾನ, ಇದು ಕೇವಲ ಸೇವೆಯಲ್ಲ, ಒಂದು ಮಹಾ ಮಾನವೀಯ ಕರ್ಮ, ರಕ್ತದಾನ ಮಾಡಿದರೆ ದೇಹದಲ್ಲಿ ಹಳೆಯ ರಕ್ತಕಣಗಳು ಹೋಗಿ, ಹೊಸ ರಕ್ತಕಣಗಳು ಉತ್ಪತ್ತಿಯಾಗುವುದರಿಂದ ದೇಹವೂ ತಾಜಾಗುತ್ತದೆ ಎಂದರು.
ರವೀಂದ್ರ ಕುಮಾರ್ ಮಾತನಾಡಿ, ನರೇಂದ್ರ ಮೋದಿಯವರು ಈ ದೇಶದ ಮಹಾನ್ ಶಕ್ತಿ. ಅವರ ಜನುಮದಿನದ ಶುಭಸಂದರ್ಭದಲ್ಲಿ ಯುವಮೋರ್ಚಾ ತಂಡವು ರಕ್ತದಾನ ಶಿಬಿರ ಆಯೋಜಿಸಿದ್ದು ಅತ್ಯಂತ ಶ್ಲಾಘನೀಯ ಎಂದರು.
ಶಿಬಿರದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಜಯರಾಮ್ ಸಾಲ್ಯಾನ್,
ತಾಲೂಕು ಉಪಾಧ್ಯಕ್ಷರಾದ ಬೋಳ ಸತೀಶ್ ಪೂಜಾರಿ, ಯುವಮೋರ್ಚಾ ಕರ್ನಾಟಕದ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ತಾಲೂಕು ಕಾರ್ಯದರ್ಶಿ ಸುಮಿತ್ ಶೆಟ್ಟಿ ಕೌಡೂರು, ಜಿಲ್ಲಾ ಯುವಮೋರ್ಚಾ ಖಜಾಂಜಿ ಗುರುರಾಜ್ ಮಾಡ,
ತಾಲೂಕು ಯುವಮೋರ್ಚ ಅಧ್ಯಕ್ಷರು ರಾಕೇಶ್ ಶೆಟ್ಟಿ ಕುಕ್ಕುಂದೂರು, ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಧನುಷ್ ಆಚಾರ್ಯ ಅತ್ತೂರು, ರಜತ್ ರಾಮ್ ಮೋಹನ್ ಮುಡಾರು, ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.