ಬೆಂಗಳೂರು:ಮೀಸೆ ತಿರುವಿ ಮೆರೆದೋರೆಲ್ಲ ಮಣ್ಣಾದರು, ಪ್ರಿಯಾಂಕ ಖರ್ಗೆಯವರೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ನಿಮ್ಮ “ತಿರುಕನ ಕನಸಿ” ನ ಬಗ್ಗೆ ಖಂಡಿತ ಆಕ್ಷೇಪವಿಲ್ಲ. ಆದರೆ ಅಧಿಕಾರಕ್ಕೆ ಬಂದರೆ RSS ನಿಷೇಧ ಮಾಡುತ್ತೇವೆ ಎಂಬ ನಿಮ್ಮ ದರ್ಪದ ಮಾತಿನ ಬಗ್ಗೆ ಕನಿಕರ ಪಡುತ್ತೇವೆ ಎಂದು ಮಾಜಿ ಸಚಿವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ X ನಲ್ಲಿ ಕಿಡಿಕಾರಿದ್ದಾರೆ.
RSS ಇಂತಹ ಅದೆಷ್ಟೋ ಬೆದರಿಕೆ ಹಾಗೂ ಆಕ್ರಮಣಕ್ಕೆ ತನ್ನನ್ನು ಒಡ್ಡಿಕೊಂಡು ದಿಟ್ಟವಾಗಿ ಎದುರಿಸಿದೆ.ನೆಹರೂ,ಇಂದಿರಾ ಅವರಂತಹ ವಂಶವಾದಿ ಸರ್ವಾಧಿಕಾರಿಗಳೇ ಕಾಲನ ಆಟದಲ್ಲಿ ಎಲ್ಲಿ ನಿಂತರು? ಎಂಬುದನ್ನು ಇತಿಹಾಸ ಕಂಡಿದೆ.ಅಧಿಕಾರ ಮದ ಇಂತಹ ದುರಹಂಕಾರದ ಹೇಳಿಕೆ ನೀಡುವಂತೆ ಪ್ರಚೋದಿಸುತ್ತದೆ.ಆಕಾಶಕ್ಕೆ ಜಿಗಿಯುವ ಮುನ್ನ ಅಂಗಳವನ್ನಾದರೂ ಮೊದಲು ಅಳತೆ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಮಾತಿಗೆ X ನಲ್ಲಿ ಸುನಿಲ್ ಕುಮಾರ್ ಲೇವಡಿ ಮಾಡಿದ್ದಾರೆ.