Share this news

ಕಾರ್ಕಳ: ಹಿಂದೂಗಳು ಎಲ್ಲರೂ ಹಿಂಸೆಗೆ ಪ್ರಚೋದಿಸಿ,ಹಿಂಸೆ ಮಾಡುವವರು ಎಂದು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾಡಿರುವ ಭಾಷಣಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸುನಿಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದುತ್ವ ಹಾಗೂ ಹಿಂದೂಗಳ ನ್ನು ವಿರೋಧಿಸುವ ಗುಣ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ರಕ್ತದಲೇ ಬಂದಿದೆ ಎಂದು ವಾಗ್ದಾಳಿ ನಡೆಸಿದ ಅವರು, ಸಮಸ್ತ ಹಿಂದೂ ಸಮಾಜ‌ ಮಾತ್ರವಲ್ಲ, ಇಡೀ ಭಾರತೀಯ ನಾಗರಿಕರಿಗೆ ಕಾಂಗ್ರೆಸ್ ಮಾಡಿರುವ ಅಪಮಾನವಾಗಿದೆ. ಶತಶತಮಾನಗಳಿಂದ ವಿದೇಶಿ ದಬ್ಬಾಳಿಕೆ ಸಹಿಸಿಕೊಂಡು, ಸ್ವಾಭಿಮಾನದಿಂದ ಬದುಕುತ್ತಿರುವ ಹಿಂದೂಗಳು ಎಲ್ಲರನ್ನೂ ಒಳಗೊಂಡು ಸಹಬಾಳ್ವೆ ನಡೆಸುವವರೇ ಹೊರತು ಯಾರನ್ನೂ ಕೂಡ ಹಿಂಸಿಸುವವರಲ್ಲ. ಈ ಹಿಂದೆ ಕಾಂಗ್ರೆಸ್ ಮಿತ್ರಪಕ್ಷ ಡಿಎಂಕೆಯ ಸಚಿವ ಉದಯನಿಧಿ ಸನಾತನ ಧರ್ಮವನ್ನು ಅವಹೇಳನ ಮಾಡಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಲೋಕೋಪಯೋಗಿ ಸಚಿವ ಹಿಂದೂ ಶಬ್ದಕ್ಕೇ ಅಪಮಾನ ಮಾಡಿದ್ದರು. ಇದೀಗ ರಾಹುಲ್ ಗಾಂಧಿ ಸಂಸತ್ತಿನೊಳಗೆ ದೇಶದ ಕಾಲ ಕೋಟ್ಯಾಂತರ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ.ಇಂತಹ ಅವಮಾನ್ನು ಇನ್ನೆಷ್ಟು ದಿನ ಹಿಂದೂಗಳು ಸಹಿಸಿಕೊಂಡಿರಬೇಕು? ಕಾಂಗ್ರೆಸ್ ಗೆ ಹಿಂದೂಗಳ ವಿರುದ್ಧ ಯಾಕೆ ಇಷ್ಟೊಂದು ದ್ವೇಷ ಎಂದು ಸುನಿಲ್ ಪ್ರಶ್ನಿಸಿದ್ದಾರೆ.

                        

                          

                        

                          

 

Leave a Reply

Your email address will not be published. Required fields are marked *