ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಗೋಸೇವಾ ಸಂಯೋಜಕ ಮಂಜು ಶಿವಪುರ ಮಾತನಾಡಿ ರಕ್ಷಾಬಂಧನ ಸಹೋದರತೆಯ ಸಂಕೇತ, ತ್ಯಾಗದ , ಶ್ರೀರಕ್ಷೆಯ ಸಂಕೇತವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ಆರತಿ ಬೆಳಗಿ, ತಿಲಕವಿಟ್ಟು, ಸಿಹಿ ತಿನಿಸಿ ರಕ್ಷೆ ಕಟ್ಟಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟ್ ನ ಸದಸ್ಯರಾದ ಲಕ್ಷ್ಮಣ್ ಭಟ್, ವಿಷ್ಣುಮೂರ್ತಿ ನಾಯಕ್, ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ್ ಶೆಟ್ಟಿ, ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಹಾಗೂ ಗುರುವೃಂದದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಅನಿತಾ ಮಾತಾಜಿ ಸಂದೇಶ ವಾಚಿಸಿ, ವಿದ್ಯಾರ್ಥಿಗಳಾದ ಲಾವಣ್ಯ ಹೆಚ್ ವಿ ನಿರೂಪಿಸಿ, ಅಪೂರ್ವ ಸ್ವಾಗತಿಸಿ, ಅಕ್ಷತಾ ವಂದಿಸಿದರು.