Share this news

ಬೆಂಗಳೂರು, ಆ 23:   ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಾಕ್ಷö್ಯಗಳನ್ನು ಕಲೆಹಾಕಿದಷ್ಟು ಮಾಹಿತಿಗಳು ಹೊರಬರುತ್ತಿದ್ದು ಇದೀಗ ಈ ಕೊಲೆ ಪ್ರಕರಣದಲ್ಲಿ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ರೇಣುಕಾಸ್ವಾಮಿಯನ್ನು ಮೆಗ್ಗಾರ್ ಯಂತ್ರದಿAದ ಶಾಕ್ ನೀಡಿದ ಪರಿಣಾಮವಾಗಿ ಆತ ಮೃತಪಟ್ಟಿದ್ದಾನೆ ಎಂದು ಎಫ್‌ಎಸ್ಸೆಲ್ ವರದಿಯಲ್ಲಿ ದೃಡಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಂತ ಗಂಭೀರ ಕೊಲೆ ಪ್ರಕರಣವಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಈಗಾಗಲೇ ಎರಡು ತಿಂಗಳಿನಿAದ ಜೈಲಿನಲ್ಲಿದ್ದು, ಇತ್ತ ಪೊಲೀಸರು ಈ ಪ್ರಕರಣದ ಕುರಿತಂತೆ ಬರೋಬ್ಬರಿ 3 ಸಾವಿರ ಪುಟಗಳ ಚಾರ್ಜ್ಶೀಟ್ ಸಿದ್ದಪಡಿಸಿದ್ದು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ತನಿಖೆ ಆರಂಭದಿAದಲೂ ಪೊಲೀಸರು ಸಾಕ್ಷಿ ನಾಶವಾಗದಂತೆ ಎಚ್ಚರವಹಿಸಿದ್ದು, ಪ್ರತಿಯೊಂದು ಅಂಶಗಳನ್ನು ಕೂಡ ಬಹಳ ಜಾಗರೂಕವಾಗಿ ನಿಭಾಯಿಸಿದ್ದು, ಎಲ್ಲಾ ಸಾಕ್ಷö್ಯಗಳು ಡಿ ಗ್ಯಾಂಗ್ ನಡೆಸಿದ ಕೃತ್ಯಕ್ಕೆ ಪೂರಕವಾಗಿವೆ ಎನ್ನಲಾಗಿದೆ. ಇದೀಗ ಮೆಗ್ಗಾರ್ ಯಂತ್ರದಿAದಲೇ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಎನ್ನುವ ಸ್ಪೋಟಕ ವಿಚಾರ ದರ್ಶನ್ ಗ್ಯಾಂಗ್ ನಿದ್ದೆಗೆಡಿಸಿದ್ದು ಆರೋಪಿಗಳಿಗೆ ಕಂಟಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ

                        

                          

                        

                          

 

`

Leave a Reply

Your email address will not be published. Required fields are marked *