Share this news

ಹೆಬ್ರಿ: ಮುನಿಯಾಲು ಸಮೀಪದ ಚಟ್ಕಲ್‌ಪಾದೆಯಿಂದ ಕಾಡುಹೊಳೆ ಸೇತುವೆವರೆಗಿನ ರಾಜ್ಯ ಹೆದ್ದಾರಿಯ ಸುಮಾರು 2 ಕಿ,ಮೀ ರಸ್ತೆಯು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಕಾಮಗಾರಿಯಿಂದ ಸಾಕಷ್ಟು ಮರಗಳು, ಪ್ರಯಾಣಿಕರ ತಂಗುದಾಣ, ರಿಕ್ಷಾ ಪಾರ್ಕಿಂಗ್ ಜಾಗ ಎಲ್ಲವೂ ರಸ್ತೆ ಅಗಲೀಕರಣದಿಂದ ಮಾಯವಾಗಿದೆ.

ಈಗಾಗಲೇ ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿದ್ದು, ಈ ಕಾಮಗಾರಿಗಾಗಿ ಇಕ್ಕೆಲದ ಸುಮಾರು 250ಕ್ಕೂ ಅಧಿಕ ಮರಗಳನ್ನು ಕಡಿದು ಉರುಳಿಸಲಾಗಿದೆ.ಇದಲ್ಲದೇ ಪೇಟೆ ರಸ್ತೆ ಅಗಲೀಕರಣಕ್ಕಾಗಿ ಮುನಿಯಾಲು ಪೇಟೆಯಲ್ಲಿನ ಎರಡು ಪ್ರಯಾಣಿಕರ ತಂಗುದಾಣವನ್ನು ಹಾಗೂ ರಿಕ್ಷಾ ನಿಲ್ದಾಣವನ್ನು ಕೆಡವಲಾಗಿದೆ. ಪ್ರಯಾಣಿಕರ ತಂಗುದಾಣವಿಲ್ಲದೇ ರಣಬಿಸಿಲಿನಲ್ಲೇ ರಸ್ತೆ ಬದಿ ಬಸ್ಸಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ ರಿಕ್ಷಾ ಚಾಲಕರು ಕೂಡ ತಮ್ಮ ರಿಕ್ಷಾ ನಿಲ್ಲಿಸಲು ಸ್ಥಳವಿಲ್ಲದೇ ಬಿಸಿಲಿನಲ್ಲೇ ರಸ್ತೆ ಬದಿಯಲ್ಲಿ ನಿಲ್ಲಿಸುವಂತಾಗಿದೆ. ಒಂದು ಬದಿ ಬಿಸಿಲಿನ ಪ್ರತಾಪ ಇನ್ನೊಂದೆಡೆ ಕಾಮಗಾರಿಯ ಧೂಳು ಇದರಿಂದ ಸ್ಥಳೀಯರು ಹೈರಾಣಾಗಿದ್ದಾರೆ. ಜನಸಂಖ್ಯೆ ಬೆಳೆದಂತೆ ವಾಹನಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುವ ಹಿನ್ನಲೆಯಲ್ಲಿ ರಸ್ತೆಗಳನ್ನು ಅಭಿವೃದ್ದಿ ಮಾಡುವುದು ಕೂಡ ಅನಿವಾರ್ಯವಾಗುತ್ತದೆ. ಆದರೆ ಅಭಿವೃದ್ಧಿ ಚಟುವಟಿಕೆಗಳಿಗೆ ಕಡಿಯಲಾದ ಮರಗಳ ಬದಲಿಗೆ ಗಿಡಗಳನ್ನು ನೆಡುವ ಔದಾರ್ಯತೆಯನ್ನು ಲೋಕಪಯೋಗಿ ಇಲಾಖೆ ತೋರಬೇಕಿದೆ ಮಾತ್ರವಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗದAತೆ ಪ್ರಯಾಣಿಕರ ತಂಗುದಾಣ ಮರು ನಿರ್ಮಾಣ ಹಾಗೂ ರಿಕ್ಷಾ ತಂಗುದಾಣವನ್ನು ಕೂಡ ನಿರ್ಮಿಸಬೇಕಿದೆ ಎಂದು ಸ್ಥಳೀಯ ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.

             

Leave a Reply

Your email address will not be published. Required fields are marked *