Share this news

ಕಾರ್ಕಳ, ಜ.07: ಕಾರ್ಕಳ ಪುರಸಭಾ ವ್ಯಾಪ್ತಿಯ ಅನಂತಶಯನ ಬಳಿ ಅಮೃತ್ 2.0 ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಅಳವಡಿಸಲು ಈ ಹಿಂದೆ ಪುರಸಭೆ ವತಿಯಿಂದ ಅಳವಡಿಸಿದ್ದ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಆದರೆ ಅಮೃತ್ ಯೋಜನೆಯ ಕಾಮಗಾರಿ ಮುಗಿದು 6 ತಿಂಗಳು ಕಳೆದರೂ ಅನಂತಶಯನ ನಿವಾಸಿಗಳಿಗೆ ಮಾತ್ರ ನೀರು ಸಂಪರ್ಕ ಮರುಜೋಡಣೆಯಾಗಿಲ್ಲ ಎಂದು ಪುರಸಭೆ ಮಾಜಿ ಸದಸ್ಯ ಪ್ರಕಾಶ ರಾವ್ ಸಂತ್ರಸ್ತರ ಜೊತೆ ಬ್ಯಾನರ್ ಹಿಡಿದು ಪ್ರತಿಭಟಿಸಿದ್ದಾರೆ.

ಅಮೃತ್ ಯೋಜನೆಯ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿಲ್ಲ, ಆದ್ದರಿಂದ ಪುರಸಭೆ ಅಧಿಕಾರಿಗಳಿಗೆ ನೀರಿನ ಸಂಪರ್ಕ ಮರು ಜೋಡಣೆ ಮಾಡುವಂತೆ ಸಾಕಷ್ಟು ಬಾರಿ ಫೋನ್ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ವಿಪರ್ಯಾಸ ಎಂದರೆ ಕಳೆದ  6 ತಿಂಗಳಿನಿಂದ ನೀರು ಬರದಿದ್ದರೂ ತಿಂಗಳ ನೀರಿನ ಬಿಲ್ಲು ಮಾತ್ರ ನಿರಂತರವಾಗಿ ಬರುತ್ತಿದೆ ಎಂದು ಪುರಸಭೆ ಆಡಳಿತದ ವಿರುದ್ಧ ಪ್ರಕಾಶ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *