Share this news

ಕಾರ್ಕಳ ಆ.13: ಕಾರ್ಕಳ ತಾಲೂಕು ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ಆನೇಕೆರೆ ಶ್ರೀ ಕೃಷ್ಣ ಕ್ಷೇತ್ರ ಸಭಾ ಮಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಕೆ. ಬಾಲಕೃಷ್ಣ ಶೆಟ್ಟಿ ಅವರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಿಕ್ಷಾ ಚಾಲಕರು ಕಾನೂನು ಪಾಲನೆ ಮಾಡಬೇಕು,ಸಾರ್ವಜನಿಕರ ಜತೆ ತಾಳ್ಮೆಯಿಂದ ವರ್ತಿಸಬೇಕು, ತಮ್ಮ ವಾಹನದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ತಪಾಸಣೆಗೆ ಸಹಕರಿಸಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ದಾನಿಗಳಾದ ಕೆ. ಕಮಾಲಾಕ್ಷ ಕಾಮತ್ ಮಾತನಾಡಿ, ಎಲ್ಲರೂ ಪರೋಪಕಾರ ಮಾಡಿ
ಶಿಸ್ತಿನಿಂದ ತಮ್ಮ ವೃತ್ತಿಯನ್ನು ಮಾಡಬೇಕೆಂದು ತಿಳಿಸಿದರು
ಕುಕ್ಕುಂದೂರು ದುರ್ಗಾ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಜಗದೀಶ್ ಹೆಗ್ದೆ ಉಪಸ್ಥಿತರಿದ್ದು ಎಲ್ಲಾ ರಿಕ್ಷಾ ಚಾಲಕರು ಮಾದರಿಯಾಗಿ ಬೆಳೆಯಬೇಕು ಎಂದು ತಿಳಿಸಿದರು
ಈ ಸಂದರ್ಭ ವೃತ್ತಿನಿರತ ಹಿರಿಯ ರಿಕ್ಷಾ ಚಾಲಕರಿಗೆ, ಸಾಧಕ ರಕ್ಷಾ ಚಾಲಕರಿಗೆ, ಸಾಧಕ ರಿಕ್ಷಾ ಚಾಲಕರ ಮಕ್ಕಳಿಗೆ ಸನ್ಮಾನಿಸಲಾಯಿತು. ಹಾಗೂ 2023 24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪ್ರಥಮ ಪಿ ಯು ಸಿ,ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಈ ಸಂದರ್ಭದಲ್ಲಿ 2024 -25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು
ಉಪಾಧ್ಯಕ್ಷರಾದ ವಿಶ್ವನಾಥ ಭಂಡಾರಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ರಾವ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಅಣ್ಣಿ ಮಡಿವಾಳ ವರದಿ ವಾಚಿಸಿದರು. ಕೋಶಾಧಿಕಾರಿ ಹರೀಶ್ ದೇವಾಡಿಗ ಲೆಕ್ಕಪತ್ರ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಶಿವಾನಂದ ಪೂಜಾರಿ ವಂದಿಸಿದರು ದಿನೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು

                        

                          

                        

                          

 

`

Leave a Reply

Your email address will not be published. Required fields are marked *