ಕಾರ್ಕಳ: ಬ್ಯಾಂಕಿನಲ್ಲಿ ಸಾಲ ಮರುಪಾವತಿ ಮಾಡದೇ ಇರುವ ಕಾರಣ ಬ್ಯಾಂಕ್ ನವರು ನ್ಯಾಯಾಲಯದಲ್ಲಿ ದಾವೆ ಹಾಕಿ, ನ್ಯಾಯಾಲಯದ ಡಿಕ್ರಿ ಆದೇಶದ ಬಳಿಕ ಅಡವಿರಿಸಿದ್ದ ಆಸ್ತಿಯನ್ನು ಬಹಿರಂಗ ಹರಾಜು ಹಾಕಿದ ಬಳಿಕ ಬಿಡ್ಡುದಾರರಿಂದ ಹಣ ವಸೂಲಿ ಮಾಡಿ ಅವರಿಗೆ ಹರಾಜಾದ ಮನೆಯನ್ನು ನೀಡಿದ್ದರು. ಆದರೆ ಹರಾಜಿನಲ್ಲಿ ಮನೆ ಪಡೆದುಕೊಂಡಿದ್ದ ಮನೆ ಮಾಲೀಕ ಮನೆಯ ಬಳಿ ಹೋದಾಗ ಸಾಲ ಮರುಪಾವತಿ ಮಾಡಲಾಗದೆ ಮನೆ ಕಳೆದುಕೊಂಡ ವ್ಯಕ್ತಿಗಳು ಮನೆಯ ಬೀಗ ಮುರಿದು ದಾಂಧಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಮಾಳದಲ್ಲಿ ಜ.13 ರಂದು ನಡೆದಿದೆ.
ಮಾಳ ನಿವಾಸಿ ರಾಮಣ್ಣ ಎಂಬವರು ಕಳೆದ 31/01/2020 ರಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಬಜಗೊಳಿ ಶಾಖೆಯಲ್ಲಿ ಮಾಳ ಗ್ರಾಮದ ಸರ್ವೆ ನಂಬ್ರ 276/17 ರಲ್ಲಿನ 0-04 ಎಕ್ರೆ ಕೃಷಿ ಸ್ಥಿರಾಸ್ತಿ ಹಾಗೂ ಸರ್ವೆ ನಂಬ್ರ 276/12 ರಲ್ಲಿನ 0-10 ಎಕ್ರೆ ಕೃಷಿಯೇತರ ಸ್ಥಿರಾಸ್ತಿ ಹಾಗೂ ಅದರಲ್ಲಿನ ಮಾಳ ಗ್ರಾಮ ಪಂಚಾಯತ್ ಡೋರ್ ನಂಬ್ರ 2-39 ಹೊಂದಿರುವ ಮನೆಯ ಸಮೇತ ಅಡವು ಹಾಕಿ ಬ್ಯಾಂಕಿನಿAದ ರೂಪಾಯಿ 3.80.000 ಸಾಲ ಪಡೆದುಕೊಂಡಿದ್ದರು.
ಈ ಮಧ್ಯೆ ರಾಮಣ್ಣ ರವರು ಮೃತಪಟ್ಟಿದ್ದು ಮರಣದ ನಂತರ ಅವರ ಮಕ್ಕಳು ಸ್ಥಿರಾಸ್ತಿಯ ವಾರೀಸುದಾರರಾಗಿದ್ದು ರಾಮಣ್ಣ ರವರು ಪಡೆದ ಸಾಲವನ್ನು ಮರುಪಾವತಿಸುವಂತೆ ಬ್ಯಾಂಕ್ ವತಿಯಿಂದ ಹಲವಾರು ಬಾರಿ ನೋಟಿಸ್ ನೀಡಿದ್ದರೂ ಸ್ಪಂದಿಸಿರಲಿಲ್ಲ. ಬಳಿಕ ಸಾಲ ವಸೂಲಾತಿಗಾಗಿ ಬ್ಯಾಂಕ್‌ನ ಶಾಖಾಧಿಕಾರಿ ಮಂಗಳೂರಿನ ಸಹಕಾರ ಸಂಘಗಳ ವಸೂಲಾತಿ ಅಧಿಕಾರಿಯವರ ನ್ಯಾಯಾಲಯದಲ್ಲಿ ಜೆ ಆರ್ ಎಂ / ಡಿಡಿಎಸ್/40/2022-23 ರಂತೆ ದಾವೆ ಹಾಕಿದ್ದು ನ್ಯಾಯಾಲಯವು ಸದ್ರಿ ದಾವೆಗೆ ಸಂಬAದಿಸಿದAತೆ ದಿನಾಂಕ 16/02/2023 ರಂದು ಡಿಕ್ರಿ ಆದೇಶವನ್ನು ಮಾಡಿತ್ತು. ಆ ಬಳಿಕ ಬ್ಯಾಂಕಿನಿAದ ಸಾಲಕ್ಕೆ ಆಧಾರ ಮಾಡಿರುವ ಸ್ಥಿರಾಸ್ತಿಗಳಲ್ಲಿ ಅಸ್ತಿತ್ವದಲ್ಲಿರುವ ಮನೆಯನ್ನು ಅಮಾನತು ಮಾಡಿ 27/03/2024 ರಂದು ಬಹಿರಂಗ ಹರಾಜು ಮಾಡಿದ್ದು ¸ಹರಾಜಿನಲ್ಲಿ ಮಾಳ ನಿವಾಸಿ ಕಿರಣ್ ರವರು ಬಿಡ್ಡುಮಾಡಿ ಸದ್ರಿ ಮನೆಗೆ ಮಾಲಿಕರಾಗಿದ್ದರು. .
ಆ ಬಳಿಕ ನಿಯಮಾನುಸಾರ ಮನೆಗೆ ಬೀಗವನ್ನು ಅಳಡಿಸಿದ್ದು ಜ. 23 ರಂದು ಮನೆಯ ಮಾಲಿಕರಾದ ಕಿರಣ್ ರವರು ಮನೆಯ ಬಳಿ ಹೋದಾಗ ಮನೆಯ ಹಿಂದಿನ ಮಾಲಕರು ಮನೆಯ ಬೀಗವನ್ನು ಒಡೆದು ಒಳಪ್ರವೇಶಿಸಿ ಸುಮಾರು 10,000 ರೂ. ನಷ್ಟವನ್ನುಂಟುಮಾಡಿದ್ದಾರೆ ಎಂದು ಬ್ಯಾಂಕ್‌ನ ಶಾಖಾಧಿಕಾರಿ ಶಾಂತಲಾ ಅವರು ದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.