Share this news

 ಕಾರ್ಕಳ, ಸೆ.15: ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಅವರನ್ನು ಸಂಘದಲ್ಲಿ ಹಣಕಾಸಿನ ಅವ್ಯವಹಾರ, ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಆಡಳಿತ ಮಂಡಳಿ ಸಭೆಗಳ ಕಾರ್ಯಸೂಚಿಯಲ್ಲಿ ಅಜೆಂಡಾ ಇಲ್ಲದೇ ಆರ್ಥಿಕ ಪ್ರತಿಫಲದ ನಿರ್ಣಯ ತೆಗೆದುಕೊಂಡಿರುವುದು, ನಿರ್ದೇಶಕರುಗಳ ಬಹುಮತದ ಆಕ್ಷೇಪಣೆಗಳನ್ನು ಪರಿಗಣಿಸದೇ ನಿರ್ಣಯಗಳನ್ನು ದಾಖಲಿಸಿರುವುದು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರೊಂದಿಗೆ ಶಾಮಿಲಾಗಿ ನಿರ್ಣಯಗಳನ್ನು ತಮಗೆ ಬೇಕಾದ ರೀತಿಯಲ್ಲಿ ದಾಖಲಿಸಿರುವುದು ಮುಂತಾದ ಆರೋಪಗಳನ್ನು ಪರಿಗಣಿಸಿ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್, 2025ರ ಸೆ. 12 ರಿಂದ ಅನ್ವಯವಾಗುವಂತೆ ಮುಂದಿನ 5 ವರ್ಷಗಳ ಅವಧಿವರೆಗೆ ಸಂಘದ ಆಡಳಿತ ಮಂಡಳಿ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಆದೇಶದ ಪ್ರಕಾರ ಬೋಳ ವ್ಯವಸಾಯ ಸೇವಾ ಸಂಘ ಸೇರಿದಂತೆ ಇನ್ನಾವುದೇ ಸಹಕಾರ ಸಂಘಗಳಲ್ಲಿ ಐದು ವರ್ಷಗಳ ಅವಧಿವರೆಗೆ ಚುನಾವಣೆಯಲ್ಲಿ ಆಯ್ಕೆಯಾಗಲು ಅಥವಾ ನೇಮಕವಾಗಲು ಅಥವಾ ಮುಂದುವರಿಯಲು ಅನರ್ಹವಾಗಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.
ಬೋಳ ಸದಾಶಿವ ಶೆಟ್ಟಿಯವರು ಬೋಳ ವ್ಯವಸಾಯ ಸೇವಾ ಸಂಘದಲ್ಲಿ ನಡೆಸಿರುವ ಅವ್ಯವಹಾರವನ್ನು ದಾಖಲೆ ಸಮೇತವಾಗಿ ಸಂಘದ ಇತರೆ ನಿರ್ದೇಶಕರುಗಳಾದ ಕೆ. ಮುರಳೀಧರ ಶರ್ಮ, ಸೂರ್ಯಕಾಂತ ಶೆಟ್ಟಿ , ಜಯರಾಮ್ ಸಾಲಿಯನ್, ಪ್ರವೀಣ್ ಸಾಲಿಯನ್, ಗಣಪತಿ ಭಟ್ ಶ್ರೀಮತಿ ದಿವ್ಯ ನಾಯಕ್ ಒಟ್ಟು ಆರು ಜನ ನಿರ್ದೇಶಕರುಗಳು ಸೇರಿ ಸಹಕಾರಿ ಸಂಘಗಳ ಉಪನಿಬಂಧಕರಿಗೆ ದೂರನ್ನು ಸಲ್ಲಿಸಿದ್ದರು. ಈ‌ ಕುರಿತು ವಿಚಾರಣೆ ನಡೆಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಏ16 ರಂದು ಮೊದಲ ಬಾರಿಗೆ ಸದಾಶಿವ ಶೆಟ್ಟಿಯವರನ್ನು ಅನರ್ಹಗೊಳಿಸಿದ್ದರು.ಆದರೆ ಸದಾಶಿವ ಶೆಟ್ಟಿಯವರು‌ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ ಸದ್ರಿ , ಅರ್ಜಿದಾರರಿಗೆ ತಮ್ಮ ಅಹವಾಲು ಹಾಗೂ ದಾಖಲೆಗಳನ್ನು ಸಲ್ಲಿಸಲು ಸಮಯವಕಾಶ ನೀಡಿ ಮರುವಿಚಾರಣೆ ನಡೆಸುವಂತೆ ಸಹಾಯ ಉಪ ನಿಬಂಧಕರು ಕುಂದಾಪುರ ಇವರಿಗೆ ಆದೇಶ ನೀಡಿತ್ತು. ಆದೇಶದಂತೆ ಸಹಾಯ ಉಪ ನಿಬಂಧಕರು ಜೂ.24 ರಂದು ಮರು ವಿಚಾರಣೆ ಆರಂಭಿಸಿ ಸದಾಶಿವ ಶೆಟ್ಟಿ ಯವರಿಗೆ ತನ್ನ ಅಹವಾಲು ಸಲ್ಲಿಸಲು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಮತ್ತೆ ಕಾಲಾವಕಾಶವನ್ನು ನೀಡಿತ್ತು.ಅರ್ಜಿದಾರರು ಸೂಕ್ತ ದಾಖಲೆಗಳನ್ನು ಹಾಜರುಪಡಿಸದ ಹಿನ್ನೆಲೆಯಲ್ಲಿ ಹಾಗೂ ಇವರ ವಿರುದ್ಧದ
ದೂರು ಅರ್ಜಿಯಲ್ಲಿನ ಆರೋಪಗಳು ಸಾಬೀತಾಗಿದ್ದು ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ನ್ಯಾಯಾಲಯವು ಸೆ.12 ಸದಾಶಿವ ಶೆಟ್ಟಿಯವರನ್ನು ಅನರ್ಹಗೊಳಿಸಿ ಆದೇಶಿಸಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *