Share this news

ಕಾರ್ಕಳ: ಇತ್ತೀಚಿಗಿನ ಸಂಬAಧಗಳಲ್ಲಿ ಮಾನವೀಯತೆಗೆ ಬೆಲೆಯಿಲ್ಲ ಕೇವಲ ಹಣ ಆಸ್ತಿಯಿದ್ದರೆ ಮಾತ್ರ ಸಂಬAಧಗಳಿಗೆ ಬೆಲೆ ಎನ್ನುವುದು ಅಕ್ಷರಶಃ ನಿಜವಾಗಿದೆ. ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ತಂದೆಯ ಆಸ್ತಿಗಾಗಿ ಒಡಹುಟ್ಟಿದವರೇ ಪರಸ್ಪರ ಕಿತ್ತಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿರಿರುವ ಪ್ರಸಂಗ ನಡೆದಿದೆ.

ಸಾಣೂರು ಗ್ರಾಮದ ಗಣೇಶ್ ಕಾಮತ್ ಎಂಬವರು ಕಳೆದ ಹಲವು ವರ್ಷಗಳಿಂದ ತನ್ನ ಕಿರಿಯ ಮಗಳಾದ ಅಶ್ವಿನಿ ಎಂಬವರ ಜತೆ ಗೇರುಬೀಜ ಕಾರ್ಖಾನೆ ಉದ್ಯಮ ನಡೆಸಿಕೊಂಡಿದ್ದರು. ಅವರು ಕಳೆದ ಮಾ.12ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಮೊದಲು ಗಣೇಶ್ ಕಾಮತ್ ಜೀವಂತವಾಗಿರುವಾಗಲೇ ತನ್ನ ಆಸ್ತಿಯನ್ನು ಕಿರಿಯ ಮಗಳ ಹೆಸರಿಗೆ ವೀಲು ನಾಮೆ ಮಾಡಿಸಿಕೊಂಡು ವ್ಯವಹಾರದ ಎಲ್ಲಾ ಹಕ್ಕನ್ನು ಕಿರಿಯ ಮಗಳು ಅಶ್ವಿನಿಯವರಿಗೆ ವರ್ಗಾಯಿಸಿದ್ದರು ಎನ್ನಲಾಗಿದೆ. ಇತ್ತ ಗಣೇಶ್ ಕಾಮತ್ ನಿಧನದ ಬಳಿಕ ಅಶ್ವಿನಿಯವರು ಗೇರುಬೀಜ ಕಾರ್ಖಾನೆ ಉದ್ಯಮ ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದರು.

ಇತ್ತ ಗಣೇಶ್ ಕಾಮತ್ ನಿಧನದ ಬಳಿಕ ಅವರ ಆಸ್ದತಿಯ ಪಾಲಿನಲ್ಲಿ ಗಣೇಶ್ ಕಾಮತ್ ಅವರ ಪತ್ನಿ ವೀಣಾ ಕಾಮತ್, ಇನ್ನಿಬ್ಬರು ಮಕ್ಕಳಾದ ಅನುರಾಧಾ ಹಾಗೂ ರಾಧಿಕಾ ತಂದೆ ಗಣೇಶ್ ಕಾಮತ್ ಅವರ ಆಸ್ತಿಯಲ್ಲಿ ತಮ್ಮ ಪಾಲಿನ ಹಕ್ಕು ಬೇಕೆಂದು ತಗಾದೆ ಎತ್ತಿದ್ದಾರೆ. ಆಸ್ತಿಯ ವಿಚಾರವಾಗಿ ಗಣೇಶ್ ಕಾಮತ್ ಅವರ ಉತ್ತರಕ್ರಿಯೆಯಾದಿ ಕ್ರಮಗಳು ಮುಗಿದ ಬಳಿಕ ಮಾ 24ರಂದು ಆಸ್ತಿ ವಿಚಾರವಾಗಿ ವೀಣಾ ಕಾಮತ್, ಅನುರಾಧಾ ,ರಾಧಿಕಾ ಹಾಗೂ ಅವರ ಗಂಡ ದಾಮೋದರ ಎಂಬವರು ಸೇರಿಕೊಂಡು ಗಣೇಶ್ ಕಾಮತ್ ಅವರ ಕಿರಿಯ ಮಗಳಾದ ಅಶ್ವಿನಿಯವರಿಗಹೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿ ತಂದೆ ಗಣೇಶ್ ಕಾಮತ್ ಅವರ ಅಶ್ವಿನಿ ಹೆಸರಿಗೆ ಮಾಡಿಟ್ಟಿದ್ದ ಆಸ್ತಿಯ ವೀಲು ನಾಮೆಯ ಮೂಲಪ್ರತಿ ಹಾಗೂ ಜಾಗ್ವಾರ್ ಕಾರನ್ನು ಕಳವು ಮಾಡಿಕೊಂಡು ಹೋಗಿದ್ದಾರೆ, ಅಲ್ಲದೇ ಕಾರ್ಕಳದ ಯೂನಿಯನ್ ಬ್ಯಾಂಕಿನಲ್ಲಿರಿಸಿದ್ದ ಚಿನ್ನಾಭರಣ ಹಾಗೂ ಇತರೇ ಸೊತ್ತುಗಳನ್ನು ಅಶ್ವಿನಿಯವರ ಗಮನ ತಾರದೇ ಕಳವು ಮಾಡಿದ್ದಾರೆ, ಅಲ್ಲದೇ ಕಾರ್ಖಾನೆಯ ಸಿಬ್ಬಂದಿಗಳಿಗೂ ವೇತನ ನೀಡದಂತೆ ಬ್ಯಾಂಕ್ ಮ್ಯಾನೇಜರಿಗೆ ಒತ್ತಡ ಹಾಕಿದ್ದಾರೆ ಎಂದು ಅಶ್ವಿನಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.

 

Leave a Reply

Your email address will not be published. Required fields are marked *