ಕಾರ್ಕಳ: ತಾಲೂಕಿನ ಸಾಣೂರು ಎಂಬಲ್ಲಿ ಮಾರುತಿ ಓಮ್ನಿ ಹಾಗೂ ಆಲ್ಟೋ ಕಾರು ಮುಖಾಮುಖಿ ಡಿಕ್ಕಿಯಾಗಿ ಎರಡೂ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ.
ಶೇಖ್ ಅಶ್ರಫ್ ಎಂಬವರು ಪತ್ನಿ ಸಾಜಿದಾ ಬಾನು, ಮಕ್ಕಳಾದ ಹನ ಸುಲ್ತಾನ, ಹಾಗೂ ಹಮ್ದಾನ್ ಎಂಬವರೊAದಿಗೆ ಭಾನುವಾರ ಸಂಜೆ ಕಾರ್ಕಳದಿಂದ ಬೆಳುವಾಯಿ ಕಡೆಗೆ ಹೋಗುತ್ತಿದ್ದಾಗ ಸಾಣೂರು ಗ್ರಾಮದ ಸಾಣೂರು ರಾಮಮಂದಿರದಿಂದ ಸ್ವಲ್ಪ ಮುಂದೆ ಇರುವ ಕೋಳಿ ಫಾರ್ಮ್ ಬಳಿ ಎದುರುಗಡೆಯಿಂದ ಬಂದ ಓಮ್ನಿ ಕಾರು ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಆಲ್ಟೋ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಮ್ನಿ ಕಾರಿನ ಚಾಲಕ ಹಾಗೂ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















`
