ಕಾರ್ಕಳ: ಇಂದು ನಡೆದ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಾಣೂರು ನರಸಿಂಹ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ರಾಯಲ್ ನೊರೋನ್ಹ ಅಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಶಹನಾಜ್ ನಡೆಸಿಕೊಟ್ಟರು.
ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸಾಣೂರು ನರಸಿಂಹ ಕಾಮತ್ ರವರು ಮೂರನೇ ಅವಧಿಗೆ ಅವಿರೋಧವಾಗಿ ಸರ್ವಾನುಮತದಿಂದ ಪುನರಾಯ್ಕೆ ಯಾಗಿರುತ್ತಾರೆ.ಕಳೆದ ಮೂರು ದಶಕಗಳಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯ ರಾಗಿರುವ ಇವರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಭಾರತಿ ಟೂರಿಸಂ ಡೆವಲಪ್ಮೆಂಟ್ ಕೋ ಆಪರೇಟರೇಟೀವ್ ಹಾಗೂ ಪರಂಪರ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿರುತ್ತಾರೆ. ಕಳೆದ ಎರಡು ದಶಕಗಳಿಂದ ಸಹಕಾರಿ ಕ್ಷೇತ್ರದ ರಾಷ್ಟ್ರಮಟ್ಟದ ಸಂಘಟನೆ ಸಹಕಾರ ಭಾರತಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಇತ್ತೀಚೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ. ಇತ್ತೀಚೆಗೆ ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿಯೂ ಕೂಡ ಆಯ್ಕೆಯಾಗಿರುತ್ತಾರೆ.
ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ರಾಯಲ್ ನೊರೋನ್ಹ ರವರು ಪ್ರಗತಿಪರ ಯುವ ಕೃಷಿಕರಾಗಿದ್ದುಕೊಂಡು, ಉತ್ತಮ ಹೈನುಗಾರರಾಗಿರುತ್ತಾರೆ.
ಸಂಘದ ನೂತನ ನಿರ್ದೇಶಕರುಗಳಾಗಿ ಕೊರಗಶೆಟ್ಟಿ, ಸೋಮಶೇಖರ್, ಜಯ ಶೆಟ್ಟಿಗಾರ್, ಜಯಾನಂದ, ಪ್ರವೀಣ ಶೆಟ್ಟಿ, ಪೂರ್ಣಿಮಾ ಕಿಣಿ, ಶ್ರೀಮತಿ ಯಶೋಧ. ಆರ್. ಸುವರ್ಣ, ಸಂಜೀವಿ, ದಿಲೀಪ್ ಶೆಟ್ಟಿ, ಸೈಮನ್ ಡಿ’ಸೋಜ, ಶ್ರೀಧರ ಸಮಗಾರ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ನೂತನವಾಗಿ ಈ ಬಾರಿ ಹೊಸ ನಿರ್ದೇಶಕರಾಗಿ ಆಯ್ಕೆಯಾದ ಶ್ರೀಮತಿ ಪೂರ್ಣಿಮಾ ಕಿಣಿ ಮತ್ತು ಶ ದಿಲೀಪ್ ಶೆಟ್ಟಿಯವರನ್ನು ಅಭಿನಂದನೆಸಲಾಯಿತು.ಕಳೆದ ಹತ್ತು ವರ್ಷಗಳಿಂದ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವಿ ಸಲ್ಲಿಸಿದ ಶ್ರೀಮತಿ ಯಶೋದ ಸುವರ್ಣ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಆಯ್ಕೆ ಪ್ರಕ್ರಿಯೆಯ ಎಲ್ಲಾ ವ್ಯವಸ್ಥೆಗಳನ್ನು ಸಮಯ ಬದ್ಧವಾಗಿ ಆಗುವಂತೆ ಸಹಕರಿಸಿದ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಶೆಟ್ಟಿ , ಹಾಲು ಪರೀಕ್ಷಕಿ ಶ್ರೀಮತಿ ಪ್ರಮೀಳಾ ಹಾಗೂ ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದ ಎಲ್ಲಾ ನಿರ್ದೇಶಕರುಗಳಿಗೆ ಹಾಗೂ ನಿರ್ದೇಶಕರುಗಳ ಸರ್ವಾನುಮತದ ಆಯ್ಕೆಗೆ ಸಹಕರಿರಿಸಿದ ಸಂಘದ ಎಲ್ಲಾ ಸದಸ್ಯರಿಗೆ ಸಾಣೂರು ನರಸಿಂಹ ಕಾಮತ್ ಅಭಿನಂದನೆ ಸಲ್ಲಿಸಿದ್ದಾರೆ.
ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕರಾದ ಪ್ರವೀಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಜಯಶೆಟ್ಟಿಗಾರ್ ವಂದನಾರ್ಪಣೆಗೈದರು.