ಕಾರ್ಕಳ:ಎಸ್ಸಿ ,ಎಸ್ಪಿ, ಹಾಗೂ ಎಸ್ ಟಿಪಿ ಕಾರ್ಯಕ್ರಮಗಳ 2025 -26 ನೇ ಸಾಲಿನ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಸರ್ಕಾರದ ನಿರ್ಧಾರ ಸರಿಯಲ್ಲ.ಅದ್ದರಿಂದ 2013 ರ SCSP – TSP ಕಾಯ್ದೆಯಯ 7(D) ರದ್ದಾದಂತೆ 7(C) ಯೂ ರದ್ದುಗೊಳಿಸಿ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನ ಪರಿಶಿಷ್ಟರ ಅಭಿವೃದ್ಧಿಗೆ ಬಳಕೆಯಾಗಲಿ ಎಂದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.