ಕಾರ್ಕಳ: ಸ್ಕೂಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಭಾನುವಾರ ಸಂಜೆ ಅಯ್ಯಪ್ಪನಗರದ ರಂಜಿತ್ ಬಾರ್ ಬಳಿ ನಡೆದಿದೆ.
ಕಾರ್ಕಳ ಕಡೆಯಿಂದ ಕಾರು ಚಾಲಕ ಪ್ರಸಾದ್ ತನ್ನ ಕಾರಿನಲ್ಲಿ ಉಡುಪಿ ಕಡೆಗೆ ತೆರಳುತ್ತಿದ್ದಾಗ ರಂಜಿತ್ ಬಾರ್ ಕಡೆಯಿಂದ ಸ್ಕೂಟರ್ ಸವಾರ ಉದಯ ಎಂಬಾತ ಏಕಾಎಕಿ ಮುಖ್ಯರಸ್ತೆಗೆ ನುಗ್ಗಿದ ಪರಿಣಾಮ ಕಾರಿಗೆ ಗುದ್ದಿ ಈ ಅಪಘಾತ ಸಂಭವಿಸಿದೆ.
ಈ ಅಪಘಾತದಿಂದ ಸ್ಕೂಟರ್ ಸವಾರ ಉದಯ ಗಾಯಗೊಂಡಿದ್ದು, ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.