ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದ ಕಾಮಗಾರಿಗಳ ಮಿತಿಯನ್ನು 1 ಕೋಟಿಗೆ ಹೆಚ್ಚಿಸಿ, ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ.
ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ. 2022-23ನೇ ಸಾಲಿನ ಬಜೆಟ್ ನಲ್ಲಿ ಅನುಸೂಚಿ ಜಾತಿ ಮತ್ತು ಅನುಸೂಚಿತ ವರ್ಗಗಳ ಗುತ್ತಿಗೆದಾರರಿಗೆ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಗುತ್ತಿಗೆ ಮೀಸಲಾತಿ ಮಿತಿಯನ್ನು 1 ಕೋಟಿಗೆ ಹೆಚ್ಚಿಸಲಾಗುತ್ತದೆ ಎಂಬುದಾಗಿ ಘೋಷಿಸಲಾಗಿತ್ತು.
ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದಂತೆ ನಿನ್ನೆ ನಡೆದಂತ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆ ಮಿಸಲಾತಿ ಮಿತಿ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಅನುಮೋದನೆ ನೀಡಲಾಗಿದೆ.
ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ SC ಎಡ 6%, SC ಬಲ 5.5% ಮೀಸಲಾತಿ ನೀಡಲಾಗಿದೆ. ಬೋವಿ , ಲಂಬಾಣಿ + 4.5%. ಅಲೆಮಾರಿ ಸಣ್ಣ ಜಾತಿಗಳು 1% ಸೇರಿದಂತೆ ಒಟ್ಟು ಶೇ. 17% ಮೀಸಲಾತಿ ಕಲ್ಪಿಸಲಾಗಿತ್ತು.ಪ್ರವರ್ಗ 1ಕ್ಕೆ ಶೇ. 4%, 2ಎ ಸಮುದಾಯಕ್ಕೆ ಶೇ.15, 2ಬಿ ಮೀಸಲಾತಿ ರದ್ದುಗೊಳಿಸಲಾಗಿದೆ. 2ಸಿಗೆ ಶೇ.6ರಷ್ಟು ( ಒಕ್ಕಲಿಗ ), 2ಡಿಗೆ ಶೇ.7ರಷ್ಟು ( ಲಿಂಗಾಯತ ) ಸೇರಿದಂತೆ ಒಟ್ಟು ಶೇ.32ರಷಅಟು ಮೀಸಲಾತಿ ನೀಡಲಾಗಿದೆ. ಒಬಿಸಿಯಿಂದ ಹೊರಹೋಗುವ ಮುಸ್ಲೀಮರಿಗೆ EWS ನಲ್ಲಿ ಅವಕಾಶ ನೀಡಲಾಗಿದೆ.