Share this news

ಕಾರ್ಕಳ:ಕುದುರೆಮುಖ ವನ್ಯಜೀವಿ ವಿಭಾಗ ಮತ್ತು ಕಾರ್ಕಳ ವನ್ಯಜೀವಿ ವಲಯ ಕಾರ್ಕಳ ಇವರು 71ನೇ ವನ್ಯಜೀವಿ ಸಪ್ತಾಹ 2025ರ ವಲಯ ಮಟ್ಟದಲ್ಲಿ ನಡೆಸಿದ ಪ್ರೌಢಶಾಲಾ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಕೆ.ಸೃಜನ್ ಭಟ್ ದ್ವಿತೀಯ ಸ್ಥಾನ ಗಳಿಸಿರುತ್ತಾನೆ.

ಇವನನ್ನು ಕಾರ್ಕಳ ವನ್ಯಜೀವಿ ವಲಯದ ಅಜಿತ್ ಕುಮಾರ್ ಸ್ಮರಣಿಕೆ , ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ಮತ್ತು ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಉಪಸ್ಥಿತರಿದ್ದರು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಾದ ಗೌರವ್ ಸೂರ್ಯವಂಶಿ, ಆಕಾಶ್ ಜಿ, ತೇಜಸ್ ಇವರಿಗೆ ಪ್ರಮಾಣಪತ್ರ ನೀಡಿದರು.

    

   

             

     

             

           
   

 

 

   

             

     

             

       
   

Leave a Reply

Your email address will not be published. Required fields are marked *